ರಾಯಚೂರು: ನ.28- ಶಿಕ್ಷಕ ವೃತ್ತಿ ಅತ್ಯಂತ ಉತ್ತಮವಾದ ವೃತ್ತಿಯಾಗಿದೆ. ಮಕ್ಕಳನ್ನು ಪ್ರೇರೇಪಿಸಿ ಉತ್ತಮ ಮಾರ್ಗದರ್ಶನ ನೀಡಿ ಆತ್ಮ ವಿಶ್ವಾಸ ಮೂಡಿಸಬೇಕು ಎಂದು ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್) ನಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ಶಿಕ್ಷಕರ ಐದು ದಿನ ತರಬೇತಿ ಕಾರ್ಯಾಗಾರಕ್ಕೆ ಅನಿರೀಕ್ಷಿತ ಬೇಟಿ ಪರಿಶೀಲಿಸಿದರು.
ಮಕ್ಕಳ ಭವಿಷ್ಯದ ನಿರ್ಮಾಣವನ್ನು ಮಾಡುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಉನ್ನತ ಹುದ್ದೆಗೆ ಬರುವಂತೆ ಮಾಡಲು ನನ್ನ ಶಿಕ್ಷಕರು ನನಗೆ ಪ್ರೇರಣೆ ನೀಡಿದರು ಎಂದರು. ಈ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಪಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲಾ ಮಕ್ಕಳು ಹಾಜರಾಗುವಂತೆ ನೋಂದಣಿ ಮಾಡುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಡಯಟ್ ನ ಪ್ರಾಂಶುಪಾಲಹಾಗೂ ಉಪನಿರ್ದೇಶಕ (ಅಭಿವೃದ್ಧಿ) ಇಂದಿರಾ, ಹಿರಿಯ ಉಪನ್ಯಾಸಕರುಗಳಾದ ಮಲ್ಲಿಕಾರ್ಜುನ ಜಿ . ಜೀವನ್ ಸಾಬ್, ಶಿವಮ್ಮ ಹಾಗೂ ಉಪನ್ಯಾಸಕರಾದ ಅರೀಫಾ ತಬಸುಮ್ ಇವರುಗಳು ಉಪಸ್ಥಿತರಿದ್ದರು.