ರಾಯಚೂರು,ಡಿ.೬- ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಭಾರತೀಯ ಜನತಾ ಪಕ್ಷ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿತು. ನಗರದ ನೇತಾಜಿ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿ ಬಾಂಗ್ಲಾದೇಶ ಸರ್ಕಾರ ವಿರುದ್ದ ಘೋಷಣೆಗಳನ್ನು ಹಾಕಿ ಸೂಪರ್ ಮಾರ್ಕೆಟ್ ವರೆಗೆ ಮೆರವಣಿಗೆ ನಡೆಸಲಾಯಿತು. ನಗರದವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಬಾಂಗ್ಲಾದೇಶನ್ನು ಸ್ಥಾಪಿಸಿರುವ ಭಾರತ ವಿರುದ್ದವೇ ದೌರ್ಜನ್ಯ, ಅತ್ಯಚಾರ ನಡೆಸಲಾಗುತ್ತಿದೆ. ಅಲ್ಲಿಯ ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಕೂಡಲೇ ನಿಲ್ಲಿಸಬೇಕು. ಹಿಂದೂಗಳ ವಿರುದ್ದ ನಡೆಸುತ್ತಿರುವ ಪ್ರತಿಕಾರ ಬೆಳವಣಿಗೆ ಅಶಾಂತಿಗೆ ಕಾರಣವಾಗುತ್ತದೆ. ಬಾಂಗ್ಲಾದೇಶದಲ್ಲಿ ವಾಸಮಾಡುವ ಹಿಂದುಗಳ ಪರ ದೇಶದ ಜನರು ನಿಲ್ಲುತ್ತಾರೆ ಎಂದರು. ಈ ಸಂದರ್ಬದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ ,ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಉಟ್ಕೂರು, ಯುವ ಆಧ್ಯಕ್ಷ ಎನ್.ವಿನಾಯಕರಾವ್, ನಗರಸಭೆ ಸದಸ್ಯ ಇ.ಶಶಿರಾಜ, ಕಡಗೋಳ ಆಂಜಿನೇಯ, ರಾಜಕುಮಾರ, ಬಿ.ಗೋವಿಂದ, ವಿಜಯ ಭಾಸ್ಕರ ಇಟಗಿ, ಶಶಿರಾಜ ಮಸ್ಕಿ,ವಿಜಯಕುಮಾರಸಜ್ಜನ, ಯು.ನರಸರರೆಡ್ಡಿ, ನರಸಪ್ಪ ಯಕ್ಲಾಸಪುರು ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಭಾಗಿಯಾದರು.
Megha News > Local News > ಬಾಂಗ್ಲಾ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬಿಜೆಪಿಯಿಂದ ಪಂಜಿನ ಮೆರವಣಿಗೆ