ರಾಯಚೂರು,ಮಾ.೨೮- ನಗರದ ಮಹಾರಾಷ್ಟ್ರ ಬ್ಯಾಂಕ್ ಶಾಖೆ ಮ್ಯಾನೇಜರ್ ಗ್ರಾಹಕರಿಗೆ ತಿಳಿಯದಂತೆ ದಾಖಲೆ ಸೃಷ್ಟಿಸಿ ಗೋಲ್ಡ್ ಲೋನ ಮಂಜೂರಿ ಮಾಡಿ ೧೦ ಕೋಟಿ ವಂಚಿಸಿರುವ ಪ್ರಕರಣ ಬಯಲಾಗಿದೆ.
ಬ್ತಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರರೆಡ್ಡಿ ಎಂಬಾತ ಸಾಲ ದಾಖಲೆ ಸೃಷ್ಟಿಸಿ ೧೦೫ ಖಾತೆಗಳನ್ನು ಸೃಷ್ಟಿಸಿ ೧೦ ಕೋಟಿ ೯೭ ಲಕ್ಷ ವಂಚಿಸಿರುವ ಬ್ಯಾಂಕ್ ಅಡಿಟ್ ನಲ್ಲಿ ಬಯಲಾಗಿದೆ.
ಬ್ಯಾಂಕ್ ಮ್ಯಾನೇಜರ್
ಕೆ.ನರೇಂದ್ರ ರೆಡ್ಡಿಯಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಗೆ ಭಾರೀ ಮಹಾಮೋಸ ಮಾಡಿರುವದು ಪತ್ತೆಯಾಗಿದೆ
ನಕಲಿ ಖಾತೆಗಳಿಂದ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದು29 ನಕಲಿ ಖಾತೆಗಳಿಗೆ ಗೋಲ್ಡ್ ಲೋನ್ ಹೆಸರಿನಲ್ಲಿ ವರ್ಗಾವಣೆಮಾಡಿರುವದು ಪತ್ತೆಯಾಗಿದೆ
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ
8 ಸಂಬಂಧಿಕರ ಅಕೌಂಟ್ ಗೆ ಹಣ ವರ್ಗಾಮಾಡಿದ್ದಾನೆ ಹಿಂದಿನ ಬ್ಯಾಂಕ್ ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದ.ವಂಚನೆ ಬಯಲು ಆಗುತ್ತಿದ್ದಂತೆ ಬ್ಯಾಂಕ್ ನಿಂದ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ. ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ
ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿನಲ್ ಮ್ಯಾನೇಜರ್ ಸುಚೇತ್ ನೀಡಿರುವ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಬ್ಯಾಂಕ್ ಗ್ರಾಹಕರು ಘಟನೆಯಿಂದ ಬೆಚ್ಚಿ ಬೀಳುವಂತಾಗಿದೆ.