ರಾಯಚೂರು.ನಗರದಲ್ಲಿ ವಾಹನ ಸವಾರರಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವಲ್ಲಿ ವಂಚಿಸುವ ಪ್ರಕರಣಗಳು ಕಂಡು ಬರುತ್ತಿದ್ದು ಇಂತಹದ್ದೆ ರಾಯಚೂರಿನ ಗೋವಿಂದ ರಾವ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ನಗರದ ಗಾಂಧಿ ವೃತ್ತದ ಹತ್ತಿರದಲ್ಲಿರುವ ಗೋವಿಂದ ರಾವ್ ಪೆಟ್ರೋಲ್ ಬಂಕಿನಲ್ಲಿ ಬೈಕ್ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರನ್ನು ವಂಚಿಸಿಸಿದ್ದಾರೆ.
ಬೈಕ್‌ಗೆ 100 ರೂ ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸಾವಿರ 99.82 ರೂ ಪೆಟ್ರೋಲ್ ಹಾಕಿ 100 ರೂಗೆ ಇಷ್ಟೇ ಪೆಟ್ರೋಲ್ ಬರುತ್ತೆ ಎಂದು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕುವವರು ಹೇಳಿದ್ದಾರೆ, ಇದೀ ರೀತಿ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೆಟ್ರೋಲ್ ಮಾಲೀಕರ ಸಭೆ ನಡೆಸಿದ ವೇಳೆ ಪೆಟ್ರೋಲ್ ಕಡಿಮೆ ಹಾಕುವುದರ ಕುರಿತು ದೂರು ಬಂದಿದ್ದು, ಕ್ರಮ ವಹಿಸಲಾಗುತ್ತದೆ ಎಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು.
ಆದರೆ ಪೆಟ್ರೋಲ್ ಬಂಕಿನಲ್ಲಿ ನಿತ್ಯ ವಾಹನ ಸವಾರರಿಗೆ ಪೆಟ್ರೋಲ್ ಹಾಕಿಸುವಲ್ಲಿ ವಂಚನೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ, ಇದೀಗ ಗೋವಿಂದ ರಾವ್ ಪೆಟ್ರೋಲ್ ಬಂಕಿನಲ್ಲಿ 100 ರೂ. ಪೆಟ್ರೋಲ್ ಹಾಕದೇ 99.82 ರೂ ಪೆಟ್ರೋಲ್ ಹಾಕಿ ಇಷ್ಟೇ ಬರುತ್ತೆ ಎಂದು ವಾದ ಮಾಡಿದ್ದಾರೆ.
ಈ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ವಹಿಸಬೇಕು, ಹಾಗೂ ಜಿಲ್ಲಾಧಿಕಾರಿ ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕ್ರಮ ಜರುಗಿಸಿ ವಂಚನೆ ತಡೆಯಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.