Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಏ.೨೫ರಿಂದ ೩೦ರವರೆಗೆ ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದ ಮತದಾನ

ಏ.೨೫ರಿಂದ ೩೦ರವರೆಗೆ ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದ ಮತದಾನ

ರಾಯಚೂರು:- ಭಾರತ ಚುನಾವಣೆ ಆಯೋಗವು ಮಾ.೧೬ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ೦೬-ರಾಯಚೂರು (ಪ.ಪಂ) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮನೆಯಿಂದಲೇ ಮತದಾನ(ಎ.ವಿ.ಎಸ್.ಸಿ)(೮೫+ ಹಿರಿಯ ನಾಗರೀಕರು), ಎವಿಪಿಡಿ(ವಿಕಲಚೇತನರು) ಎವಿಸಿಓ(ಕೋವಿಡ್-೧೯) ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಮನೆ ಮನೆಗೆ ತೆರಳಿ ಮತದಾನ ಮಾಡಿಸಲು ತಂಡಗಳನ್ನು ರಚಿಸಲಾಗಿದ್ದು, ಏ.೨೫ರಿಂದ ಏ.೩೦ರವರೆಗೆ ಮನೆಯಿಂದ ಮತದಾನ ಮಾಡಲು ಇಚ್ಚಿಸಿ ನಮೂನೆ-೧೨ ಡಿ ಯಲ್ಲಿ ವಿನಂತಿಸಿಕೊಂಡ ಮತದಾರರಿಗೆ ಮನೆಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ಕೈಗೊಳ್ಳುವರು. ಆದ ಕಾರಣ ಯಾರು ೮೫+ ಮೇಲ್ಪಟ್ಟ ಮತದಾರರು ವಿಕಲಚೇತನ ಮತದಾರರು ಮನೆಯಿಂದ ಮತದಾನ ಮಾಡಲು ಅರ್ಜಿ ಮೂಲಕ ವಿನಂತಿಸಿಕೊಂಡವರು ಆ ದಿನಗಳಂದು ಮನೆಯಲ್ಲಿ ಇದ್ದು. ಮತದಾನ ಮಾಡುವಂತೆ ಮತದಾರರಲ್ಲಿ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Megha News