ರಾಯಚೂರು. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಿದರು.
ನಂತರ ಮಾದ್ಯಮದವರೊಂದಿಗೆ ಮಾತನಾಡಿ,
ನಗರದ ಸಾರ್ವಜನಿಕ ಉದ್ಯಾನವನದ ಹತ್ತಿರುವಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ರವರೆಗೆ ಏರ್ಪಡಿದ ಫಲಪುಷ್ಪ ಪ್ರದರ್ಶನ ನಡೆಯಲಿದೆ, ಜಿಲ್ಲೆಯ ರೈತರು ಬೆಳೆದ ಹಣ್ಣು ತರಕಾರಿಗಳನ್ನಯ ಪ್ರದರ್ಶನಕ್ಕೆ ಇಡಲಾಗಿದೆ, ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯು 10 ಸಾವಿರ ಎಕರೆ ತರಕಾರಿ ಬೆಳೆಯಲಾಗುತ್ತದೆ, ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3, ಗಣಪತಿ, ಆನೆ, ನವಿಲು, ಸೇರಿದಂತೆ ಸ್ಥಳಿಯ ಕಲಾಕೃತಿಗಳು, ಹಾಗೂ ರೈತರು ಬೆಳೆದ ವಿವಿಧ ಹಣ್ಣು ಹಂಪಲ, ತರಕಾರಿ, ಹಾಗೂ ಕೃಷಿ ಚಟುವಟಿಕೆಗಳ ಯಂತ್ರಗಳು ನೋಡುಗರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಶಾಸಕ ದದ್ದಲ್ ಬಸನಗೌಡ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಸಿಇಒ, ರಾಹುಲ್ ಪಾಂಡ್ವೆ ತುಕಾರಾಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್. ಬಿ, ಅಪರ ಜಿಲ್ಲಾಧಿಕಾರಿ ಡಾ.ಕೆಆರ್.ದುರುಗೇಶ, ಸಹಾಯಕ ಆಯುಕ್ತೆ ಮಹೆಬೂಬಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಮದ್ ಅಲಿ, ತಹಶಿಲ್ದಾರ್ ಸುರೇಶ ವರ್ಮಾ, ಸೇರಿದಂತೆ ಅನೇಕರು ಇದ್ದರು.