ರಾಯಚೂರು. ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿಗೆ ಜಿಲ್ಲೆಯಲ್ಲಿ ರೈತರಿಂದ ಭೂಮಿ ವಶಪಡಿಸಿಕೊಂಡ ಪರಿಹಾರ ನೀಡದೇ ಇರುವು ದರಿಂದ ವಕೀಲರು ಹಾಗೂ ರೈತರು ಸಹಾಯಕ ಆಯುಕ್ತ ಕಚೇರಿಯಲ್ಲಿನ ಪೀಠೋಪಕರ ಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಚೂರು ತಾಲೂಕಿನ ಜೆ.ಮಲ್ಲಾಪುರು, ಮಾನವಿ ತಾಲೂಕಿನ ದದ್ದಲ್, ದೇವದುರ್ಗ ಸುಂಕೇಶ್ವರ ಗ್ರಾಮದಲ್ಲಿ 2008, 2009,ಹಾಗೂ 2012 ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿಗೆ ರೈತರಿಂದ ಸುಮಾರು 2 ಲಕ್ಷ 98 ಸಾವಿರದಂತೆ ಭೂಮಿಯನ್ನು ರಾಯಚೂರು ಸಹಾಯಕ ಆಯುಕ್ತರ ಮೂಲಕ ಸ್ವಾದಿನ ಪಡಿಸಿಕೊಂಡಿದ್ದರು.
ಆದರೆ ಇದುವರೆಗೆ ಯಾವುದೇ ಪರಿಹಾರ ನೀಡದೆ ಇರುವುದರಿಂದ ರೈತರು ವ್ಯಕ್ತಪಡಿ ಸಿದರು. ಈ ಕುರಿತು ಸುಮಾರು ಬಾರಿ ಕೋರ್ಟ್ ಮೂಲಕ ಪರಿಹಾರ ನೀಡಲು ಅದೇಶ ನೀಡಿದರು ಸಹ ಇದಕ್ಕೆ ಸಹಾಯಕ ಆಯುಕ್ತರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು.
ಅದರಿಂದ ಪ್ರಿನ್ಸಿಪಾಲ್ ಕೋರ್ಟ್ ಮತ್ತು ಎರಡ ನೇ ಹೆಚ್ಚುವರಿ ನ್ಯಾಯಾಲಯವು ಸಹಾಯಕ ಆಯುಕ್ತ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಹಿನ್ನಲೆಯಲ್ಲಿ ಇಂದು ವಕೀಲರು ಹಾಗೂ ರೈತರೊಂದಿಗೆ ಕಚೇರಿಯ ಪೀಠೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.