ರಾಯಚೂರು,ಜ.೩- ತಾಲೂಕಿನ ಬೀಜನಗೇರಾ ಗ್ರಾಮದ ನೀರಿನ ಟ್ಯಾಂಕಿನಲ್ಲಿ ನಾಯಿ ಸತ್ತಿರುವ ಘಟನೆಯಿಂದ ಸಾರ್ವಜನಿಕರು ಭಯಪಡುವ ಅಗತ್ತವಿಲ್ಲಟ್ಯಾಂಕಿನಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ತಿಳಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಟ್ಯಾಂಕ್ ನಿರ್ಮಿಸಲಾಗಿದೆ. ನೀರಿನವಯೋಜನೆಯಿಂದ ನೀರು ಪೂರೈಕೆ ಪ್ರಾರಂಭವಾಗಿಲ್ಲ.ಯಾರೋ ಉದ್ದೇಶಿತ ಪೂರಕವಾಗಿ ಮಾಡಿರುವ ಶಂಕೆಯಿದ್ದು ಎಫ್ ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಸ್ಥರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.