ರಾಯಚೂರು: ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ರಾಯಚೂರು ಜಿ.ಪಂ ಯೋಜನಾ ನಿರ್ದೇಶಕರಾದ ಶ್ರೀ ಶರಣಬಸರಾಜ ಕೆಸರಟ್ಟಿ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇಂದು ಶುಕ್ರವಾರ ಮೊದಲಿಗೆ ಬಿಜನಗೇರಾ ಗ್ರಾಮ ಪಂಚಾಯತಿ ತೆರಳಿ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಸೂಕ್ತ ಮಾರ್ಗದರ್ಶನವನ್ನು ಪಿಡಿಒ ರವರಿಗೆ ನೀಡಿದರು.
ನಂತರ ಜಂಬಲದಿನ್ನಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿಶೇಷ ಚೇತನರಿಗೆ ನರೇಗಾ ಯೋಜನೆ ಅಡಿಯಲ್ಲಿ ನರ್ಸರಿ ಪ್ಲಾಂಟೇಶನ್ ಕಾಮಗಾರಿ ನೀಡುವ ಸಂಬಂಧ ಸ್ಥಳ ಪರಿಶೀಲಿಸಿದರು.
ನಂತರ ಗ್ರಾಮದಲ್ಲಿರುವ ಗೋಬರಧನ ಘಟಕ, ಗೋಶಾಲೆ ಹಾಗೂ ಕೂಸಿನ ಮನೆ ಕೇಂದ್ರವನ್ನು ವೀಕ್ಷೀಸಿದರು. ನಂತರ ಗ್ರಾಮದಲ್ಲಿರುವ ಗಡಿಗೆ ತಯಾರು ಮಾಡುವ ವಿಧಾನವನ್ನು ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಎಲ್.ಕೆ. ದೊಡ್ಡಿ ಗ್ರಾ.ಪಂ ಯಲ್ಲಿರುವ ಸಂಜೀವಿನಿ ಶೆಡ್ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ: ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರು ಶ್ರೀ ಶಿವಪ್ಪ, ಪಿಡಿಒ ಶ್ರೀಮತಿ ಲಕ್ಷ್ಮೀ, ಶ್ರೀ ಮಹ್ಮದ್ ಜಹೀರ್ , ಬಿ.ಎಪ್.ಟಿ. ಜಿಕೆಎಮ್ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಇದ್ದರು.