Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ರಾಯರ ಆರಾಧನ ಮಹೋತ್ಸವದಲ್ಲಿ ಸಂಗ್ರಹಗೊಂಡ ಕಸ ಸ್ವಚ್ಛತೆ

ರಾಯರ ಆರಾಧನ ಮಹೋತ್ಸವದಲ್ಲಿ ಸಂಗ್ರಹಗೊಂಡ ಕಸ ಸ್ವಚ್ಛತೆ

ರಾಯಚೂರು: ಸ್ವಚ್ಛ ಭಾರತದ ಅಭಿಯಾನದ ಪ್ರೇರಣೆಯಾಗಿ ಸ್ವಚ್ಚ ಮಂತ್ರಾಲಯ ಶೀರ್ಷಿಕೆ ಅಡಿಯಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ಎರಡು ದಿನಗಳ ಕಾಲ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರ ನೇತ್ರತ್ವದಲ್ಲಿ ಹಮ್ಮಿಕೊಂಡಿರುವ ಸ್ವಚ್ಛ ಮಂತ್ರಾ ಲಯ ಕಾರ್ಯಕ್ರಮಕ್ಕೆ ಮಠದ ಪೀಠಾಧಿಪ ತಿಗಳಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದರು.

ನಂತರ ಮಾತನಾಡಿದ ಶ್ರೀಸುಬುಧೇಂದ್ರ ಸ್ವಾಮೀಜಿ, ಮಹಾತ್ಮ ಗಾಂಧಿಯವರ ಕನಸಿನ ಭಾರತ ಸುಂದರವಾಗಿಸುವ ದೃಷ್ಟಿಯಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತ ಬರಲಾಗುತ್ತದೆ. ಇದೇ ದೃಷ್ಟಿ ಯಿಂದ ತೀರ್ಥ ಕ್ಷೇತ್ರ ಮಠ ಮಂದಿರಗಳಲ್ಲಿನ ಸ್ವಚ್ಛತೆ ಕೊರತೆ ಇರುವುದನ್ನು ಮನಗಂಡು ಸ್ವಚ್ಛ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹದೇವಪುರ ಕ್ಷೇತ್ರದ ಮುಖಂಡರು ಕಾರ್ಯ ಕರ್ತರ ತಂಡ ಸ್ವಚ್ಛ ಮಂತ್ರಾಲಯ ಹಮ್ಮಿಕೊಂಡಿ ರುವುದು ಶ್ಲಾಘನೀಯ ಎಂದರು.
ಭಾರತ ದೇಶಕ್ಕೆ ವಿಶಿಷ್ಟ ಸ್ಥಾನವಿದೆ. ಭಾರತ ದೇಶ ಸ್ವಚ್ಛವಾಗಿಲ್ಲ ಎನ್ನುವ ಅಪವಾದ ಸರಿಯಲ್ಲ. ವಿದೇಶದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡ ಲಾಗುತ್ತದೆ. ಆದರೆ ಭಾರತ ದೇಶದಲ್ಲಿ ಕಸ ನಿರ್ವಹಣೆ ಬಗ್ಗೆ ಜಾಗೃತಿ ಇಲ್ಲದೆ ಇರುವುದರಿಂದ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಲಾಗುತ್ತಿಲ್ಲ. ಸ್ವಚ್ಛತೆ ಬಗ್ಗೆ ಗಮನ ಕೊಡಬೇಕಾದ ಅವಶ್ಯಕತೆ ಇದೆ. ಉಪನ್ಯಾಸ ಮಾಡಿದರೆ ಸಾಲದು ಕಸದ ಪ್ರತಿ ಯೊಬ್ಬರೂ ಜಾಗೃತಿ ವಹಿಸಬೇಕು ಎಂದರು.
ಮಾಜಿ ಶಾಸಕ ಅರವಿಂದ ಲಿಂಬಾವಳಿ ಮಾತ ನಾಡಿ, ಇದೇ ತಿಂಗಳಲ್ಲಿ ನಡೆದ ಗುರು ರಾಯರ ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಜನ ರು ಪಾಲ್ಗೊಂಡಿದ್ದರಿಂದ ಅಲ್ಲಲ್ಲಿ ಕಸ ಸಂಗ್ರಹ ಗೊಂಡಿತ್ತು.
ಸಾವಿರಾರು ಜನ ಪಾಲ್ಗೊಳ್ಳುವ ಮಂತ್ರಾಲಯ ದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಎರಡು ದಿನಗ ಳ ಕಾಲ ಸ್ವಚ್ಛ ಮಂತ್ರಾಲಯ ಹಮ್ಮಿಕೊಳ್ಳಲಾ ಗಿದೆ. ಮಹದೇವಪುರದ ಕ್ಷೇತ್ರದ ಮುಖಂಡರು ಕಾರ್ಯಕರ್ತರ ತಂಡ ಮಠದ ವಿವಿಧ ಭಾಗಗ ಳಲ್ಲಿ ಸ್ವಚ್ಛತೆ ನಡೆಸಲಿದ್ದಾರೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರದ ಮುಖಂಡರು, ಕಾರ್ಯ ಕರ್ತರು ಒಳಗೊಂಡಿರುವ ಕರಸೇವಕರ ಎಂಟು ನೂರಕ್ಕೂ ಹೆಚ್ಚು ಜನ ಒಳಗೊಂಡಿರುವ ತಂಡ ಮಠದ ವಿವಿಧ ಭಾಗಗಳಾದ ಗೋಶಾಲೆ, ತುಂಗ ಭದ್ರಾ ನದಿ ತೀರ, ಕಲ್ಯಾಣಿ, ಸಾರ್ವಜನಿಕ ಗಾರ್ಡನ್, ಪಾಕಶಾಲೆ, ಪ್ರಸಾದ ವಿತರಣೆ ಕೇಂದ್ರ ಮುಂತಾದಡೆ ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು.
ಈ ಸಂಧರ್ಭದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ವೆಂಕಟಸ್ವಾಮಿ ರೆಡ್ಡಿ, ಮಹೇಂದ್ರ ಮೋದಿ, ರಾಜೇಶ್, ಪಿಳ್ಳಪ್ಪ, ಜಯದೇವ್, ಬಾಬುರೆಡ್ಡಿ, ಬಿದರಹಳ್ಳಿ ರಾಜೇಶ್, ಅಶೋಕ್, ನಲ್ಲೂರಹಳ್ಳಿ ಚಂದ್ರಶೇಖರ್ ರೆಡ್ಡಿ, ಚನ್ನಸಂದ್ರ ಚಂದ್ರಶೇಖರ್, ವರ್ತೂರು ಶ್ರೀಧರ್, ಸತೀಶ್ ರೆಡ್ಡಿ ಮತ್ತಿತ್ತರರು ಉಪಸ್ಥಿತರಿದ್ದರು.

Megha News