ಸಿಂಧನೂರು. ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಪೋಲಿಸರು ಬಂಧಿಸಿ 1.35 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ದೇವದುರ್ಗ ತಾಲ್ಲೂಕಿನ ಜಾಗೀರ ಜಾಡಲದಿನ್ನಿಯ ನಾಗರಾಜ ಮೂರ್ತೆಪ್ಪ ದೇವರಮನಿ ಬಂಧಿತ ಆರೋಪಿಯಾಗಿದ್ದಾನೆ.
ಪಟ್ಟಣದ ಮೈಬುಸಾಬ್ ಅವರ ಮನೆಯಲ್ಲಿ 1.35 ಲಕ್ಷ ಮೌಲ್ಯದ ಚಿನ್ನಾಭರಣ ಕಳತನ ಮಾಡಲಾಗಿತ್ತು. ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಚನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಸಬ್ ಇನ್‌ಸ್ಪೆಕ್ಟರ್ ಸುಜಾತಾ, ಸಿಬ್ಬಂದಿ ಶಿವರಾಜಪ್ಪ, ಅಮರೇಶ, ವಿಶ್ವನಾಥ, ಚೌಡಯ್ಯ, ಅಸ್ಲಂ ಪಾಶಾ ಮತ್ತು ಅಪ್ಜಲ್ ಪಾಶಾ ಇದ್ದರು.