ರಾಯಚೂರು.ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಜೂನ್ ತಿಂಗಳಲ್ಲಿ ಜರುಗಿದ ಬಿಎಸ್‌ಸಿ ನರ್ಸಿಂಗ್ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು ೫೯ ವಿದ್ಯಾರ್ಥಿಗಳಲ್ಲಿ ೫೮ ವಿದ್ಯಾರ್ಥಿಗಳು ೯೮ ಪ್ರತಿಶತದೊಂದಿಗೆ ತೇರ್ಗಡೆಯಾಗಿದ್ದಾರೆ. ಕಾಲೇಜಿಗೆ ಕುಮಾರಿ ರಾಧಿಕ (೩೦೦ ಕ್ಕೆ ೨೪೧ ಅಂಕ) ಪ್ರಥಮ ಸ್ಥಾನ, ಕುಮಾರಿ ನಾಝಿಯಾ ಕೌಸರ್ (೩೦೦ ಕ್ಕೆ ೨೩೯ ಅಂಕ) ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕುಮಾರಿ ಸಂಗೀತ(೩೦೦ ಕ್ಕೆ ೨೩೬ ಅಂಕ) ಮತ್ತು ಕುಮಾರಿ ಸ್ವಾತಿ. ಕೆ (೩೦೦ ಕ್ಕೆ ೨೩೬ ಅಂಕ) ತೃತೀಯ ಸ್ಥಾನ ಹಂಚಿಕೊAಡಿದ್ದಾರೆ.
೫೯ ವಿದ್ಯಾರ್ಥಿಗಳಲ್ಲಿ , ಶ್ರೇಷ್ಠ ಶ್ರೇಣಿ ೧, ಅತ್ಯುತ್ತಮ ಶ್ರೇಣಿ ೧೧, ಉತ್ತಮ ಶ್ರೇಣಿ ೩೩, ಸರಾಸರಿ ಶ್ರೇಣಿ ೧೦, ಕೆಳ ಸರಾಸರಿ ಶ್ರೇಣಿ ೦೩ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ರಿಮ್ಸ್ ನಿರ್ದೇಶಕ ಡಾ. ರಮೇಶ್ ಬಿ. ಎಚ್. ರಿಮ್ಸ್ ಪ್ರಾಂಶುಪಾಲ ಡಾ. ಬಸವರಾಜ ಎಂ ಪಾಟೀಲ್, ಮುಖ್ಯ ಆಡಳಿತಾಧಿಕಾರಿ ಡಾ. ದುರುಗೇಶ್, ಆರ್ಥಿಕ ಸಲಹೆಗಾರ ಹನುಮೇಶ ನಾಯಕ, ವೈದ್ಯಕೀಯ ಅಧೀಕ್ಷಕ ಡಾ. ಭಾಸ್ಕರ ಕೆಂಪೇಗೌಡ, ಜಿಲ್ಲಾ ಶಸ್ತç ಚಿಕಿತ್ಸಕ ಡಾ. ವಿಜಯ ಶಂಕರ, ಓಪೆಕ್ ವಿಶೇಷಾಧಿಕಾರಿ ಡಾ. ನಾಗರಾಜ ಗದ್ವಾಲ್, ಡಾ. ಅರವಿಂದ ಸಂಘವಿ, ಸ್ಥಾನಿಕ ವೈದ್ಯಧಿಕಾರಿ ಡಾ. ಶಾಮಣ್ಣ ಮಾಚನೂರ, ಶುಶ್ರೂಶಕ ಅಧೀಕ್ಷಕ ಸುಲೋಚನಾ ಎನ್, ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಶ್ರೀಶೈಲ್ ಶಂಕರಶೆಟ್ಟಿ, ಉಪ ಪ್ರಾಂಶುಪಾಲ ಶ್ರೀನಿವಾಸ ಎಮ್, ಶೈಕ್ಷಣಿಕ ಸಂಯೋಜಕ ಧರಮ್ ಸಿಂಗ್, ತರಗತಿ ಶಿಕ್ಷಕ ಸಿದ್ರಾಮಪ್ಪ ಸಜ್ಜನ್, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಹಾಸ್ಟೆಲ್ ಸಿಬ್ಬಂದಿಗಳು, ಶುಶ್ರೂಷಕರ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.