ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಸರ್ಕಾರ ಅಧಿಸೂಚನೆ ಪ್ರಕಟ
ರಾಯಚೂರು,ಡಿ.೪- ರಾಯಚೂರು ನಗರಸಭೆಯನ್ನು ಮಹಾನಗರ ಸಭೆಯನ್ನಾಗಿಸಲು ಆಕ್ಷೇಪಣೆಗಳನ್ನು ಅಹ್ವಾನಿಸಿ ಆಕ್ಷೇಪಣೆ ಸಲ್ಲಿಕೆಯಗದೇ ಇರುವದರಿಂದ ಅಧಿಕೃತವಾಗಿ ಮಹಾನಗರ ಪಾಲಿಕೆಯಾಗಿ ನಗರಾಭಿವೃದ್ದಿ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ಕಲ್ಬುರ್ಗಿಯಲ್ಲಿನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿಸುವ ನಿರ್ಧರಿಸಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದೇ ಇರುದವರಿಂದ ಅಧಿಕೃತ ಅಧಿಸೂಚನೆಯನ್ನು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಹೊರಟಿಸಿದ್ದಾರೆ.
ನಗರಸಭೆ ವ್ಯಾಪ್ತಿಗೆ ೪೩.೮೫ ಕಿಮಿ ವ್ಯಾಪ್ತಿ ಹಾಗೂ ಮೂರು ಲಕ್ಷ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ.ಹೊಸದಾಗಿ ಯಾವುದೇ ಪ್ರದೇಶ ಸೇರ್ಪಡೆಗೊಳಿಸದೇ ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿರುವ ಪ್ರದೇಶವನ್ನೇ ಮಹಾನಗರ ಪಾಲಿಕೆ ವ್ಯಾಪ್ತಿಯನ್ನಾಗಿಸಲು ನಿರ್ಧರಿಸಲಾಗಿದೆ. ರಾಯಚೂರು ನಗರಸಭೆ ಮಹಾನಗರ ಪಾಲಿಕೆ ಅಧಿಸೂಚನೆ ಪ್ರಕಟವಾಗಿದ್ದರಿಂದ ಪಾಲಿಕೆಯಾಗಿ ಕಾರ್ಯನಿರ್ವಹಿಸುವ ಕಾರ್ಯ ಚಟುವಟಿಕೆಗಳಿಗೆ ವೇಗ ಪಡೆಯುಲುಸಹಕಾರಿಯಾಗಿವೆ.
Megha News > Local News > ರಾಯಚೂರು ನಗರಸಭೆ ಮಹಾನಗರಪಾಲಿಕೆಯಾಗಿ ಸರಕಾರ ಅಧಿಸೂಚನೆ
ರಾಯಚೂರು ನಗರಸಭೆ ಮಹಾನಗರಪಾಲಿಕೆಯಾಗಿ ಸರಕಾರ ಅಧಿಸೂಚನೆ
Tayappa - Raichur04/12/2024
posted on
Leave a reply