ರಾಯಚೂರು, ನ.೧೧- ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿAದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಸುಧೀರ ಕುಮಾರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಆದೇಶಿಸಿದ್ದಾರೆ.
ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಇವರ ಟಿಪ್ಪಣಿ ಮೇರೆಗೆ ತನಿಖೆಗೆ ಸೂಚಿಸಲಾಗಿದೆ. ೧೫ ದಿನಗಳಲ್ಲಿ ತನಿಖಾವರದಿಯನ್ನು ನೀಡುವಂತೆಯೂ ಸೂಚಿಸಲಾಗಿದೆ. ಹಿಂದಿನ ಅಪರ ಕಾರ್ಯದರ್ಶಿಯಾಗಿದ್ದ ಡಾ.ಇ.ವಿ.ರಮಣರೆಡ್ಡಿ ನೇತೃತ್ವದಲ್ಲಿ ಈಗಾಗಲೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ೪೫ ಕೋಟಿ ರೂ ವೆಚ್ಚದಲ್ಲಿ ೩೧೫ ಹೊಸ ಬಸ್ ಖರೀದಿಸಲು ಅನುದಾನ ನೀಡಿದ್ದು , ಅನುದಾನವನ್ನುಬೇರೆ ಕಾಮಗಾರಿಗಳಿಗೆ ಬಳಸಿರುವದು, ೪೭ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿ ೩೭ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿರುವದು, ೮೧೫ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಅನುದಾನ ಅನುಮೋದನೆ ನೀಡಲಾಗಿದ್ದರೂ ಅನುಷ್ಠಾನಗೊಳಿಸಲಾಗದೇ ಇರುವದು, ೨.೧೨.೨೦೨೨ ಮತ್ತು ೮.೭.೨೦೨೨ ರಂದು ನಡೆದಿರುವ ಸಭೆಯಲ್ಲಿ ಎರಡು ವರ್ಷಗಳ ಕಾಮಗಾರಿ ರದ್ದುಪಡಿಸುವಂತೆ ನಿರ್ಧರಿಸಿದ್ದರೂ ಕ್ರಮವಹಿಸದೇ ಇರುವದು ೩೧೫ ಕೋಟಿ ರೂಗಳಲ್ಲಿ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿAದ ೧ ಕೋಟಿ ಸಸಿಗಳನ್ನುನಡೆಲು ಆರು ಜಿಲ್ಲೆಗಳಲ್ಲಿ ಜಾರಿಗೊಳಿ ಅನುದಾಣ ದುರ್ಬಳಕೆ ಮಾಡಿರುವದು, ೩೨೭ ಕೋಟಿ ರೂ ಅನುದಾನವನ್ನು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಖಾಸಗಿ ಅನುದಾನಿತ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಂ ನಿರ್ಮಿಸಿ ಅಧಿಕಾರ ದುರುಪಯೋಗ ಪಡೆಸಿಕೊಂಡಿರುವದು ಸೇರಿದಂತೆ ಅಕ್ರಮಗಳ ಪಟ್ಟಿಯನ್ನು ನೀಡಿ ಆರೋಪಿತರ ಸ್ಪಷ್ಟ ಮಾಹಿತಿಯೊಂದಿಗೆ ಸ್ಪಷ್ಟವಾದ ಅಭಿಪ್ರಾಯವನ್ನು ೧೫ ದಿನಗೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ನಾಲ್ಕು ಜನ ಅಧಿಕಾರಿ ತಂಡ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಗೆ ಬಿಜೆಪಿ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಮಹಾಲೇಖಪಾಲಕರು ಸಹ ಅನೇಕ ಆಕ್ಷೇಪಣೆಗಳನ್ನು ಉಲ್ಲೇಖಿಸಿದ್ದು. ಅಪರ ಕಾರ್ಯದರ್ಶಿ ಇ.ವಿ.ರಮಣರೆಡ್ಡಿಯವರು ಸಹ ನೀಡಿರುವ ವರದಿ ಆಧಾರಿ ನಿವೃತ್ತ ಐಎಎಸ್ ಅಧಿಕಾರಿ ಸುಧೀರ ಕುಮಾರ ನೇತೃತ್ವದಲ್ಲಿ ಮತ್ತೋರ್ವ ಐಎಎಸ್ ಅಧಿಕಾರ ಕೆ.ಎನ್.ರಮೇಶ, ಲೆಕ್ಕ ಪರಿಶೋಧನ ಇಲಾಖೆ ಅಪರ ನಿರ್ದೇಶಕರಾದ ಉಷಾ.ಪಿ, ಕೆಎಸ್‌ಎಚ್‌ಐಪಿಯ ಮುಖ್ಯ ಅಭಿಯಂತರ ಕೆ.ಪಿ.ಶಿವುಕುಮಾರ ಒಳಗೊಂಡ ತಂಡ ತನಿಖೆ ನಡೆಸಿ ವರದಿ ನೀಡಲಿದೆ. ಕೆಕೆಆರ್‌ಡಿಬಿಯಲ್ಲಿ ನಡೆದಿರುವ ಅಕ್ರಮಗಳಿಗೆ ಪಾರವೇ ಇಲ್ಲದೇ ಹೋಗಿದೆ. ಬೇರ ರಾಜ್ಯದ ರೈಲ್ವೆ ನಿಲ್ದಾಣ ಅಭಿವೃದ್ದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕಟೌಟ್‌ಗೂ ಮಂಡಳಿ ಬಳಿಸಿರುವ ಆರೋಪಗಳಿಗೆ. ನೂರಾರು ಕೋಟಿ ಅಕ್ರಮ ತನಿಖೆ ನಡೆಯಲಿದ್ದು ತಪ್ಪಿತಸ್ಥರ ವಿರುದ್ದ ಕ್ರಮವಾಗುತ್ತದೆಯೇ ಎಂಬದು ಮಾತ್ರ ಪ್ರಶ್ನೆಯಾಗಿz
Megha News > Local News > ಬಿಜೆಪಿ ಅವಧಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಅಕ್ರಮ: ತನಿಖೆ ಸರಕಾರ ಆದೇಶ’
ಬಿಜೆಪಿ ಅವಧಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಅಕ್ರಮ: ತನಿಖೆ ಸರಕಾರ ಆದೇಶ’
Tayappa - Raichur12/11/2024
posted on
Leave a reply