ಮಂತ್ರಾಲಯ: ವಿಶೇಷ ಅಂಚೆ ಲಕೋಟೆ ಮೂ ಲಕ ಶ್ರೀ ರಾಘವೇಂದ್ರ ಸ್ವಾಮಿಗಳು ಅಪಾರ ಭಕ್ತಾದಿಗಳ ಮನೆಗೆ ತಲುಪಿಸುವ ಕಾರ್ಯ ಅಂಚೆ ಇಲಾಖೆ ಮಾಡಿರುವುದು ಶ್ಲಾಘನೀಯ ಎಂದು ಮಂತ್ರಾಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಶ್ರೀ ಮಠದ ಆವರಣದಲ್ಲಿ ಯೋಗೀಂದ್ರ ಸಭಾ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ 2ನೇ ದಿನ ಬುಧವಾರ ಸಂಜೆ ನಡೆದ ಅಂಚೆ ಇಲಾಖೆಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರ ವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಗೊಳಿಸಿ ಮಾತನಾಡಿದರು, ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಸಹಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದ್ದು, ದೇಶದಲ್ಲಿ ನೆಲೆಸಿರುವ ರಾಯರ ಅಪಾರ ಭಕ್ತಾದಿಗಳಿಗೆ ಅಂಚೆ ಲಕೋಟೆ ಮೂಲಕ ಮನೆಗೆ ಬರಲಿದ್ದು, ಭಕ್ತರಲ್ಲಿ ಸಂತಸ ಹೆಚ್ಚಿಸಲಿದೆ ಎಂದರು.
ಅಂಚೆ ಲಕೋಟೆ ಬಿಡುಗಡೆಗಾಗಿ ಕಾರ್ಯಪ್ರವೃತ ರಾಗಿ ಕಾರ್ಯ ನಿರ್ವಹಿದ ಅಂಚೆ ಇಲಾಖೆ ಅಧಿ ಕಾರಿಗಳಿಗೆ ಶ್ರೀ ಮಠ ಅಭಿನಂಧಿಸಲಿದೆ. 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಮಠದ ವತಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿ ಇದ್ದು,ತುಂಗಾನದಿ ಕಾರಿಡಾರ್ ( ತುಂಗಾ ಮಾರ್ಗ) ಹಾಗೂ ಶ್ರೀ ಜಗನ್ನಾಥ ದಾಸರ ಜೀವನ, ಕೃತಿಗಳ ಪರಿಚಯಮಾಡಿಕೊಡುವ ಸಂಗ್ರಹಾಲಯ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ಇಲಾಖೆಯ ಮುಖ್ಯಸ್ಥ ರಾಜೇಂದ್ರ ಕುಮಾರ್, ಮೈಸೂರಿನ ಡಿ.ಪಿ ಮಧುಸೂದನ್, ವೆಂಕಟ ನರಸಿಂಹ ಆಚಾರ್ಯ, ರಾಜಪುರೋಹಿತ್,ಆಂದ್ರಪ್ರದೇಶದ
ಧಾರ್ಮಿಕ ಪರಿಷತ್ ಸದಸ್ಯ ಎಸ್ ಗೋವಿಂದ ಹರಿ, ಲಕ್ಷ್ಮೀ ಮಾಧವಿ, ರಾಜೇಶ,ಶಂಕರ್ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.