ರಾಯಚೂರು. ಮಹಾನಗರ ಪಾಲಿಕೆಯ ಕೆಲ ಕಾರ್ಪೋರೇಟರಗಳು ಗುತ್ತಿಗೆದಾರರ ಕಾಮಗಾ ರಿಗಳಲ್ಲಿ ಹಸ್ತಾಕ್ಷೇಪ ಹಾಗೂ ಅನಗತ್ಯ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ರಾಯಚೂರು ಕಾಂಟ್ರಾಕ್ಟ್ ಅಸೋಸಿಯೇಷನ್ ವತಿಯಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆದಾರರು (ಕ್ಲಾಸ್-4 ರಿಂದ ಕ್ಲಾಸ್-01) ರವರೆಗೆ ಕಾಮಗಾ ರಿಗಳನ್ನು ಗುಣಮಟ್ಟದಿಂದ ನಿರ್ವಹಿಸುತ್ತಿದ್ದಾ ಬಂದಿದೆ, ಇತ್ತೀಚಿಗೆ ಕೆಲ ಮಹಾನಗರ ಪಾಲಿಕೆಯ ಕಾರ್ಪೋರೇಟರಗಳು ಟೆಂಡರಗಳಲ್ಲಿ ಭಾಗವಹಿ ಸಿದ ಗುತ್ತಿಗೆದಾರರಿಗೆ ಹಲವಾರು ರೀತಿಯ ಕಿರು ಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದುವರೆದು ಕಾಮಗಾರಿಯನ್ನು ಪಡೆದ ಗುತ್ತೇದಾರರಿಗೆ ಬೆದರಿಕೆ ಒಡ್ಡಿ ಕಾಮಗಾರಿಗಳನ್ನು ತಮಗೆ ನೀಡುವಂತೆ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ, ಕಾಮಗಾರಿಯನ್ನು ನೀಡದಿದ್ದಲ್ಲಿ ಗುತ್ತಿಗೆದಾರರಿಗೆ ಮಾನಸಿಕವಾಗಿ ತೊಂದರೆ ಯನ್ನು ನೀಡುತ್ತಿದ್ದಾರೆ. ಇದರಿಂದ ಗುತ್ತಿಗೆದಾರರು ಸಾಕಷ್ಟು ಆರ್ಥಿಕ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಹಾಗೂ ಸಾಲಗಾರರ ಹೊರೆಯನ್ನು ಎದುರಿಸುತ್ತಿದ್ದೇವೆ, ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಹಾಗೂ ಕೆಲ ಕಾರ್ಪೋರೇಟೆಗಳ ಕಿರುಕುಳ, ದಬ್ಬಾಳಿಕೆ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎನ್ ಕೆ.ನವಾಜ್, ಉಪಾಧ್ಯಕ್ಷ ಸೋಹನ್ ಕುಮಾರ, ಕೆ.ಭಗವಂತ ರೆಡ್ಡಿ, ವೈ.ಸತೀಶ ಕುಮಾರ, ಸುಖಮುನಿ, ಜುಬೇರ್ ಅಹ್ಮದ್, ಸೇರಿದಂತೆ ಅನೇಕರು ಇದ್ದರು.