Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಎಚ್.ಡಿ.ಕುಮಾರಸ್ವಾಮಿ ಹಿಟ್ ಆಂಡ್ ರನ್ ನಾಯಕ: ಅಗತ್ಯ ಬಿದ್ದರೆ ಶಾಸಕರ ಖರೀದಿ ಪ್ರಕರಣ ತನಿಖೆಗೆ- ಎನ್.ಎಸ್.ಬೋಸರಾಜು

ಎಚ್.ಡಿ.ಕುಮಾರಸ್ವಾಮಿ ಹಿಟ್ ಆಂಡ್ ರನ್ ನಾಯಕ: ಅಗತ್ಯ ಬಿದ್ದರೆ ಶಾಸಕರ ಖರೀದಿ ಪ್ರಕರಣ ತನಿಖೆಗೆ- ಎನ್.ಎಸ್.ಬೋಸರಾಜುOplus_131072

ರಾಯಚೂರು, ನ.೧೫- ಕಾಂಗ್ರೆಸ್ ಪಕ್ಷದ ೯ ಜನ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿರುವದುಈಗಾಗಲೇ ಶಾಸಕರುಗಳ ಹೇಳಿಕೊಂಡಿದ್ದಾರೆ. ಅದೇ ಮಾಹಿತಿ ಮೇರೆಗೆ ಮುಖ್ಯಮಂತ್ರಿಗಳು ೪೦ ರಿಂದ ೫೦ ಕೋಟಿ ರೂ ಹಣ ನೀಡಿರುವ ಬೇಡಿಕೆಯಿಟ್ಟಿರುವದಾಗಿ ಹೇಳಿದ್ದಾರೆ. ಸಮಯ ಬಂದರೆ ಎಸ್‌ಐಟಿ ಇಲ್ಲವೇ ಲೋಕಾಯುಕ್ತ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಹೇಳಿದರು.
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ನಿತ್ಯವೂ ಸುಳ್ಳು ಆರೋಪ ಮಾಡುವದು ಕೆಲಸವಾಗಿದೆ. ಹಿಟ್ ಆಂಡ್ ರನ್ ನಾಯಕನೆಂದೇ ಖ್ಯಾತಿ ಪಡೆದಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯವೂ ಸೇರಿದಂತೆ ಮಧ್ಯಪ್ರದೇಶ, ರಾಜಸ್ತಾನ, ಗೋವಾ ರಾಜ್ಯದಲ್ಲಿ ಶಾಸಕರನ್ನು ಖರೀಧಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ವಿಷಯವಾಗಿ ರಾಜ್ಯದಲ್ಲಿ ಬಿಜೆಪಿಯವರು ಮಾಡುತ್ತಿರುವದನ್ನು ಹೇಳಿದ್ದಾರೆ. ಕುಮಾರಸ್ವಾಮಿಯವರು ಏನಾದರೂ ಮಾತನಾಡಬಹುದಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಈ ಕುರಿತು ಚರ್ಚೆ ನಡೆದಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವದನ್ನು ಶಾಸಕರುಗಳ ಹೇಳಿಕೊಂಡಿದ್ದಾರೆ ಎಂದರು. ಕೋವಿಡ್ ಸಮಯದಲ್ಲಿ ಬಿಜೆಪಿಯವರು ಕೋಟಿ ಕೋಟಿ ನುಂಗಿ ಹಾಕಿರುವದು ದಾಖಲೆ ಸಮೇತ ಬಹಿರಂಗವಾಗಿದೆ. ಶೀಘ್ರದಲ್ಲಿಯೇ ತನಿಖೆ ನಡೆದು ಕ್ರಮವಾಗಲಿದೆ ಎಂದರು. ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಸಚಿವ ಜಮೀರ ಅಹ್ಮದ ಹೇಳಿಕೆ ಮೇಲೆ ಚುನಾವಣಾ ಫಲಿತಾಂಶ ಅವಲಂಬಿತವಾಗಿರುವದಿಲ್ಲ. ಜನರ ನಿರ್ಧಾರ ಮೇಲೆ ಅವಂಬಿತವಾಗಿರುತ್ತದೆ. ಬಿಜೆಪಿಯವರು ಏನೇನೂ ಮಾಡಿದ್ದಾರೆ ಎಂಬುದು ಗೊತ್ತಿದೆ. ಸೋಲು ಗೆಲುವ ಸಮಾನನಾಗಿ ಸ್ವೀಕರಿಸಲಾಗುತ್ತದೆ. ಸರ್ಕಾರ ಸುಭದ್ರವಾಗಿದ್ದು ಮೂರು ಉಪಚುನಾವಣೆ ಫಲಿತಾಂಶದ ಮೇಲೆ ಅವಲಂಬಿತವಾಗಿಲ್ಲ. ರಾಜ್ಯ ಮುಖ್ಯಮಂತ್ರಿಗಳು ಶೋಷಿತರ, ದಮನಿತರು ಸೇರಿದಂತೆ ಎಲ್ಲಾವರ್ಗದ ಜನರ ಪರವಾಗಿ ಕೆಲಸಮಾಡುತ್ತಿದ್ದು ಜನಮನ್ನಣೆ ಪಡೆದಿದ್ದಾರೆ. ಬಿಜೆಪಿಯವ ಕುತಂತ್ರಕ್ಕೆ ಜನರು ಬೆಂಬಲಿಸುವದಿಲ್ಲ. ಪುರುಷರಿಗೆ ಉಚಿತ ಬಸ್ ಪಾಸ್ ನೀಡುವ ಬೇಡಿಕೆ ಕುರಿತಂತೆ ಈಗಾಗಲೇ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವದಿಲ್ಲ, ಬಜೆಟ್ ಸಂದರ್ಬದಲ್ಲಿ ಜನಾಭಿಪ್ರಾಯ ಪಡೆದು ನಿರ್ಧರಿಸಲಾಗುತ್ತದೆ ಎಂದರು.

Megha News