ರಾಯಚೂರು,ಅ.30- ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಾಗಳಲ್ಲಿ ಜಿಲ್ಲೆಯಾದ್ಯಾಂತ ಹಾಗೂ ವಿಶೇಷವಾಗಿ ನಗರ ಪ್ರದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ದ್ವೀಚಕ್ರ ವಾಹನದ ಮತ್ತು ಹಿಂಬದಿಯ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸುತ್ತಿರುವುದು ಕಂಡು ಬಂದಿರುತ್ತಿದ್ದು, ಇದೇ ನವಂಬರ್ 01ರಿಂದ ಹೆಲ್ಮಟ್ ಧರಿಸಿವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ., ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದ್ವೀಚಕ್ರ ವಾಹನದ ಸವಾರರು ಮತ್ತು ಹಿಂಬದಿಯ ಸವಾರರು ಹೆಲೈಟ್ ಧರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸುತ್ತಿರುವುದು ಕಂಡು ಬಂದಿರುವುದರಿಂದ ಸಾರ್ವಜನಿಕರ ಅಮೂಲ್ಯವಾದ ಜೀವವನ್ನು ರಕ್ಷಿಸುವ ಹಿತದೃಷ್ಠಿಯಿಂದ ರಾಯಚೂರು ಜಿಲ್ಲೆಯಾದ್ಯಾಂತ ಇದೇ 2024 ನವಂಬರ್ 01ರಿಂದ ಹೆಲ್ಮಟ್ ಧರಿಸಿವುದನ್ನು ಕಡ್ಡಾಯಗೊಳಿಸಲಾಗಿದೆ, ಅಂತ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.