Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

28 ಲೋಕಸಭೆ ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ನೇಮಕ ಪಟ್ಟಿ ಇಲ್ಲಿದೆ

28 ಲೋಕಸಭೆ ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ನೇಮಕ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಲೋಕಸಭಾ ಚನಾವಣೆಗೂ ಮುನ್ನವೇ ರಾಜ್ಯದ 28 ಕ್ಷೇತ್ರಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಈ ಕುರಿತಂತೆ ಬಿಜೆಪಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮುಂಬರುವಂತ ಲೋಕಸಭಾ ಚುನಾವಣೆಗೆ ತಯಾರಿ ನಡೆಸೋದಕ್ಕಾಗಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತಿದೆ.

ಅದರ ಭಾಗವಾಗಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಲಾಗಿದೆ ಎಂದಿದೆ.

ಈಗಾಗಲೇ ಕರ್ನಾಟಕ ರಾಜ್ಯ ಚುನಾವಣಾ ಉಸ್ತುವಾರಿಗಳನ್ನಾಗಿ ಬಿಜೆಪಿ ಹೈಕಮಾಂಡ್ ನಿಂದ ರಾಧಾ ಮೋಹನ್ ದಾಸ್ ಅಗರ್ವಾಲ್ ಹಾಗೂ ಸಹ ಉಸ್ತುವಾರಿಯನ್ನಾಗಿ ಸುಧಾಕರ್ ರೆಡ್ಡಿಯನ್ನು ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಹೀಗಿದೆ 28 ಕ್ಷೇತ್ರಗಳಿಗೆ ನೇಮಕ ಮಾಡಲಾದಂತೆ ಉಸ್ತುವಾರಿಗಳ ಪಟ್ಟಿ

ಮೈಸೂರು – ಡಾ.ಸಿಎನ್ ಅಶ್ವತ್ಥನಾರಾಯಣ

ಚಾಮರಾಜನಗರ – ಎನ್ ವಿ ಪಣಿಶ್

ಮಂಡ್ಯ – ಸುನೀಲ್ ಸುಬ್ರಹ್ಮಣಿ

ಹಾಸನ – ಎಂ.ಕೆ ಪ್ರಾಣೇಶ್

ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ್ ಪೂಜಾರಿ

ಉಡುಪಿ- ಚಿಕ್ಕಮಗಳೂರು – ಅರಗ ಜ್ಞಾನೇಂದ್ರ

ಶಿವಮೊಗ್ಗ – ರಘುಪತಿ ಭಟ್

ಉತ್ತರ ಕನ್ನಡ – ಹರತಾಳು ಹಾಲಪ್ಪ

ಧಾರವಾಡ – ಈರಣ್ಣ ಕಡಾಡಿ

ಹಾವೇರಿ – ಅರವಿಂದ್ ಬೆಲ್ಲದ್

ಚಿಕ್ಕೋಡಿ – ಅಭಯ್ ಪಾಟೀಲ್

ಬಾಗಲಕೋಟೆ – ಲಿಂಗರಾಜ್ ಪಾಟೀಲ್

ಬಿಜಾಪುರ – ರಾಜಶೇಖರ್ ಶೀಲವಂತ್

ಬೀದರ್ – ಅಮೃತ್ ಪಾಟೀಲ್

ಗುಲ್ಬರ್ಗಾ – ರಾಜು ಗೌಡ

ರಾಯಚೂರು – ದೊಡ್ಡನಗೌಡ ಹೆಚ್ ಪಾಟೀಲ್

ಕೊಪ್ಪಳ – ರಾಘುನಾಥ್ ರಾವ್ ಮಲ್ಕಾಪುರೆ

ಬಳ್ಳಾರಿ – ಎನ್ ರವಿಕುಮಾರ್

ದಾವಣಗೆರೆ – ಬೈರತಿ ಬಸವರಾಜ್

ಬೆಳಗಾವಿ- ವೀರಣ್ಣ ಚರಂತಿ ಮಠ

ಚಿತ್ರದುರ್ಗ – ಚನ್ನಬಸವಪ್ಪ

ತುಮಕೂರು – ಕೆ ಗೋಪಾಲಯ್ಯ

ಚಿಕ್ಕಬಳ್ಳಾಪುರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಕೋಲಾರ – ಬಿ ಸುರೇಶ್ ಗೌಡ

ಬೆಂಗಳೂರು ಗ್ರಾಮಾಂತರ – ನಿರ್ಮಲ್ ಕುಮರಾ ಸುರಾನ

ಬೆಂಗಳೂರು ಸೌಥ್ – ಎಂ ಕೃಷ್ಣಪ್ಪ

ಬೆಂಗಳೂರು ಕೇಂದ್ರ – ಗುರುರಾಜ್

ಬೆಂಗಳೂರು ನಾರ್ಥ್ – ಎಸ್ ಆರ್ ವಿಶ್ವನಾಥ್

Megha News