Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಪ್ಯಾರಾ ಮೆಡಿಕಲ್ ಕೋರ್ಸ್‌ ಅಧ್ಯಯನ ನಡೆಸಿ  ಕ್ಲಿನಿಕ್‌ ತೆರೆಯುವಂತಿಲ್ಲ – ಹೈಕೋರ್ಟ್ ಆದೇಶ

ಪ್ಯಾರಾ ಮೆಡಿಕಲ್ ಕೋರ್ಸ್‌ ಅಧ್ಯಯನ ನಡೆಸಿ  ಕ್ಲಿನಿಕ್‌ ತೆರೆಯುವಂತಿಲ್ಲ – ಹೈಕೋರ್ಟ್ ಆದೇಶ

ಬೆಂಗಳೂರು. ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) ಕೋರ್ಸ್‌ ಅಧ್ಯಯನ ನಡೆಸಿದ ವ್ಯಕ್ತಿಗೆ ಕ್ಲಿನಿಕ್‌ ತೆರೆದು ವೈದ್ಯಕೀಯ ಸೇವೆ ಒದಗಿಸಲು ಅನುಮತಿ ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್‌, ನಿಗದಿತ ಅರ್ಹತೆ ಪಡೆಯದೇ ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳಿಗೆ ಅಂತ್ಯ ಹಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಕ್ಲಿನಿಕ್ ನಡೆಸಲು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು (ಸಿಎಂಎಸ್-ಇಡಿ) ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅರ್ಜಿದಾರರ ವಿದ್ಯಾಭ್ಯಾಸಕ್ಕೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಎ) ಕಾಯ್ದೆ ಸೆಕ್ಷನ್ 2(ಕೆ) ಅನ್ವಯವಾಗುವುದಿಲ್ಲ. ಆದ ಕಾರಣ ಅವರನ್ನು ವೈದ್ಯರೆಂದು ಪರಿಗಣಿಸಲು ಹಾಗೂ ಖಾಸಗಿಯಾಗಿ ವೈದ್ಯಕೀಯ ಸೇವೆ ಮುಂದುವರಿಸಲು ಅನುಮತಿಸಲಾಗದು ಆದೇಶದಲ್ಲಿ ತಿಳಿಸಿದೆ.

Megha News