ರಾಯಚೂರು: ಹಿಂದುಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಗಾಯಕ ಪಂಡಿತ ಅಂಬಯ್ಯ ನುಲಿ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದೆ. 40 ವರ್ಷಗಳ ಸಂಗೀತ ತಪಸ್ಸಿಗೆ ಫಲ ಸಿಕ್ಕಿದೆ.
ರಾಯಚೂರು. ನಗರದ ಹೊಸೂರು ಗ್ರಾಮದ ಅಂಬಯ್ಯ ನುಲಿ ಅವರು ಶರಣರ ವಚನಗಳು, ದಾಸರ ಕೀರ್ತನೆಗಳು ಹಾಗೂ ಭಾವಗೀತೆಗಳನ್ನು ಹಾಡುತ್ತಿದ್ದರು, ಅಂಬಯ್ಯ ನುಲಿ ಅವರಿಗೆ ಸಂಗೀತ ಕರಗತವಾಗಿದೆ. ಅವರ ತಾತ ಮಹಾದೇವಯ್ಯ ನುಲಿ ತತ್ವಪದ ಗಾಯಕರು ಆಗಿದ್ದರು. ಅವರ ತಂದೆ ಮಹಾದೇವಯ್ಯ ನುಲಿ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದು, ಅವರ ತಾಯಿ ಶರಣಮ್ಮ ಅವರೂ ತತ್ವಪದ ಗಾಯಕರಾಗಿದ್ದರು.