ಸಿಂಧನೂರು.ಪತಿ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಿರುವ ಘಟನೆ ನಗರದ ಪಟೇಲವಾಡಿಯ ನಟರಾಜ ಕಾಲೊನಿಯಲ್ಲಿ ನಡೆದಿದೆ.
ಮೃತ ಪತ್ನಿ ಭುವನೇಶ್ವರಿ (31) ವರ್ಷ ಎಂದು ತಿಳಿದು ಬಂದಿದೆ.ಕೊಲೆ ಮಾಡಿದ ಪತಿ ನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹೊಸಳ್ಳಿ ಇ.ಜೆ ಗ್ರಾಮದ ನಾಗರಾಜ ಹಾಗೂ ಭುವನೇಶ್ವರಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿ 14 ವರ್ಷಗಳಾಗಿವೆ.
ಇಬ್ಬರು ಪುತ್ರಿಯರಿದ್ದಾರೆ. ಪತಿ ನಾಗರಾಜ ಪ್ರತಿದಿನ ಮದ್ಯ ಸೇವಿಸಿ ಪತ್ನಿಗೆ ಹೊಡೆದು ದೌರ್ಜನ್ಯ ನಡೆಸಿ, ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮೃತ ಭುವನೇಶ್ವರಿ ತಾಯಿ ಲಲಿತಮ್ಮ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಾತ್ರಿ ಪತ್ನಿ ಭುವನೇಶ್ವರಿಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಾಗ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸಿಂಧನೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.