ರಾಯಚೂರು,ಡಿ೭- ತಾಲೂಕಿನ ಇಡಪನೂರು ಪಿಎಸ್ಐ ಅವಿನಾಶ ಕಾಂಬ್ಳೆಯವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಐಜಿಪಿ ಲೋಕೇಶಕುಮಾರ ಸೇವೆಯಿಂದ ಅಮಾನತ್ ಗೊಳಿಸಿ ಆದೇಶಿಸಿಧ್ದಾರೆ.
ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಜೆ ಸಂಬಂಧಿಸಿದಂತೆ ಪೂರ್ವಮಾಹಿತಿ ನೀಡಿದರೂ ನಿರ್ಲಕ್ಷಿಸಿ ರುವ ಅರೋಪದ ಮೇಲೆ ವಿಚಾರಣೆ ನಡೆಸಲಾಗಿತ್ತು.ತನಿಖೆಯಲ್ಲಿ ಆರೋಪ ಸಾಬೀರಾಗಿರುವ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.