ಬೆಂಗಳೂರು,ಮಾ.೨೧- ರಾಜ್ಯ ಸರಕಾರ ರೂಪಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅಭಿವೃದ್ದಿ ಪೂರಕವಾಗಿದ್ದು, ಎಸ್ಸಿಇಪಿ ಮತ್ತು ಟಿಎಸ್ಪಿ ಅನುದಾನ ಬಳಕೆ ಮಾಡಿದರೆ ತಪ್ಪೇನು ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಪ್ರಶ್ನಿಸುವ ಮೂಲಕ ಪರಿಷತ್ತಿನಲ್ಲಿ ಸರಕಾರ ನಡೆಯನ್ನು ಸಮರ್ಥಿಕೊಂಡಿದ್ದಾರೆ.
ಜನಕಲ್ಯಾಣಕ್ಕಾಗಿ ಬಜೆಟ್ ನಲ್ಲಿ ೩೧ ಸಾವಿರ ಕೋಟಿ ರೂ ಅನುದಾನ ಕಾಯ್ದಿರಿಸಿ ಎಲ್ಲ ಜಾತಿ,ಧರ್ಮ,ಪಂಥ ವನ್ಯ ನೋಡದೇ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ಬು ನೀಡಲಾಗುತ್ತಿರುವದ ಸರಕಾರದ ಬದ್ದತೆಯಾಗಿದೆ. ಪ್ರತಿಶತ ೮೯ ರಷ್ಟು ಪರಿಶಿಷ್ಟ ಜಾತಿಮತ್ತು ಪಂಗಡದ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗುತ್ತಿದೆ. ಆದರೆ ಬಿಜೆಪಿಯವರು ಎಸ್ಸಿಪಿ ಮತ್ತು ಟಿಎಸ್ಸಪಿ ಅನುದಾನ ದುರುಪಯೋಗವಾಗುತ್ತಿರುವದಾಗಿ ಗುಲ್ಕೆಬ್ವಿಸುತ್ತಿದ್ದಾರೆ. ಅನುದಾನ ಎಸ್ಸಿಎಸ್ಟಿ ಸಮೂದಾಯಗಳಿಗೆ ಬಳಸುವದರಲ್ಲಿ ತಪ್ಪೇನು ಇಲ್ಲ ಆದರೆ ಕೇಂದ್ರ ಸರಕಾರ ಎಸ್ಸಿಎಸ್ಟಿ ಸಮೂದಾಯಗಳ ಅಭಿವೃದ್ದಿ ಕಡೆಗಣಸಿದೆ ಎಂದರು.ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ಮಾಹಿತಿಯಿಲ್ಲದೇ ಮಾತನಾಡಬೇಡಿ ಎಂದರು. ಸಭಾನಾಯಕ ಎನ್.ಎಸ್.ಬೋಸರಾಜ ಮದ್ಯಪ್ರವೇಶಿಸಿ ವಿಧಾನ ಪರಿಷತ್ ಸದಸ್ಯರು ಅಭಿಪ್ರಾಯ ಹೇಳಲು ಅವಕಾಶ ನೀಡಬೇಕೆಂದರು. ಮಾತುಮುಂದುವರೆಸಿದ ಎ.ವಸಂತಕುಮಾರ ಅಲ್ಪ ಸಂಖ್ಯಾತರರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಶೇ.೪ ಮೀಸಲು ನೀಡಿರುವ ಸಿದ್ದರಾಮಯ್ಯ ಸರಕಾರದ ಕ್ರಮ ಸ್ವಾಗತಿಸಿ ರಾಜ್ಯದ ಕರ ಪಾವತಿಯಲಿ ಅಲ್ಪ ಸಂಖ್ಯಾತರ ಪಾಲಿದೆ. ಅವರಿಗೆ ಮೀಸಲುನೀಡುವದಲ್ಕಿ ತಪ್ಪೇನಿದೆ ಎಂದ ಸರಕಾರ ಕ್ರಮ ಸಮರ್ಥಿಸಿಕೊಂಡರು.