Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ನಮ್ಮ ದೇಶದ ಸಂವಿಧಾನ ಉಳಿಯಬೇಕೆಂದರೆ ಸನಾತನ ಉಳಿಯಬೇಕು

ನಮ್ಮ ದೇಶದ ಸಂವಿಧಾನ ಉಳಿಯಬೇಕೆಂದರೆ ಸನಾತನ ಉಳಿಯಬೇಕು

ರಾಯಚೂರು. ನಮ್ಮ ದೇಶದ ಸಂವಿಧಾನ ಉಳಿಯಬೇಕೆಂದರೆ ಸನಾತನ ಉಳಿಯಬೇಕು. ಭಾರತ ಇಸ್ಲಾಮೀಕರಣವಾದರೆ ಸಂವಿಧಾನವೇ ಹೋಗಿಬಿಡುತ್ತದೆ. ಅವರದೇ ಆಡಳಿತ ಬರುತ್ತದೆ. ಜಿಹಾದ್ ಬರುತ್ತದೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಮೀಸಲಾತಿ ಇದೆಯೇ? ಜಮ್ಮು ಕಾಶ್ಮೀರದಲ್ಲಿ ಕಲಂ 370 ಜಾರಿಗೆ ಮಾಡುವ ಮುನ್ನ ಮೀಸಲಾತಿ ಇರಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಮೋದಿಯವರು ತಂದಿರುವ ‌ಆರ್ಟಿಕಲ್ 370ರಿಂದ ದಲಿತರಿಗೆ ಚುನಾವಣೆಗೆ ಅವಕಾಶ ಸಿಕ್ಕಿದೆ. ಕಾಶ್ಮೀರದಲ್ಲಿ ಬಾಬಾ ಸಾಹೇಬ್ ರ ನಂತರ ಮೀಸಲಾತಿ ಕೊಟ್ಟವರು ಪ್ರಧಾನಿ ಮೋದಿ. ಬಾಬಾ ಸಾಹೇಬರು ಸನಾತನ ಧರ್ಮ ‌ನಾಶವಾಗಬೇಕು ಎಂದು ಹೇಳಿಲ್ಲ. ಈಗ ಹೇಳಿಕೆ ನೀಡುವವರು ಸನಾತನ ಧರ್ಮಕ್ಕೆ ಕಾನ್ಸರ್ ಇದ್ದಂತೆ ಎಂದರು.
ಸನಾತನ ಧರ್ಮಕ್ಕೆ ರೋಗ ಬಂದಿಲ್ಲ. ಸನಾತನ ಧರ್ಮದ ಬಗ್ಗೆ ಮಾತನಾಡುವರಿಗೆ ಕುಷ್ಠ ರೋಗ, ಏಡ್ಸ್ ಹತ್ತಿದೆ,ಇವರಿಗೆ ಧಮ್, ತಾಕತ್ ಇದ್ದರೆ ಇಸ್ಲಾಂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ. ಕರುಣಾನಿಧಿ ಯಾರು ಅವನು ಸನಾತನ ಧರ್ಮದಲ್ಲಿಯೇ ಹುಟ್ಟಿದವನು. ಕೆಟ್ಟ ಹುಳುಗಳು ಈಗ ಹೊರಗೆ ಬರುತ್ತಿವೆ. ಡಿಎಂಕೆ ನಾಶವಾಗಲಿದೆ. ಮೊದಲಿನಂತೆ ತಮಿಳುನಾಡು ಉಳಿದಿಲ್ಲ ಎಂದರು.

ಔರಂಗಜೇಬ್ ನಂತಹ ಮತಾಂಧ ರಾಜನಿಗೂ ಭಾರತವನ್ನ ಇಸ್ಲಾಮೀಕರಣ ಮಾಡಲು ಆಗಲಿಲ್ಲ. ಮೊಹಮ್ಮದ್ ಘೋರಿ, ಘಜ್ನಿ ದಾಳಿ ಮಾಡಿದರೂ ಏನು ಆಗಲಿಲ್ಲ. ಒಬ್ಬ ಮಂತ್ರಿ ಹೇಳುತ್ತಾರೆ ಸನಾತನ ಧರ್ಮ ಹುಟ್ಟು ಎಲ್ಲಿ ಅಂತ? ಆ ಮಂತ್ರಿಗೆ ಅವರ ಹುಟ್ಟೇ ಅವರಿಗೆ ಗೊತ್ತಿಲ್ಲ. ಇನ್ನೂ ಸನಾತನ ಧರ್ಮದ ಬಗ್ಗೆ ಏನು ಪ್ರಶ್ನೆ ಮಾಡುತ್ತಾರೆ ಎಂದು ತಿಳಿಸಿದರು.

Megha News