Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಅಕ್ರಮ ಅಕ್ಕಿ ಸಾಗಾಣೆ, ಇಬ್ಬರ ಬಂಧನ, 16.11 ಲಕ್ಷ ಮೌಲ್ಯದ 957 ಅಕ್ಕಿ ಚೀಲ, ಲಾರಿ ವಶ

ಅಕ್ರಮ ಅಕ್ಕಿ ಸಾಗಾಣೆ, ಇಬ್ಬರ ಬಂಧನ, 16.11 ಲಕ್ಷ ಮೌಲ್ಯದ 957 ಅಕ್ಕಿ ಚೀಲ, ಲಾರಿ ವಶ

ರಾಯಚೂರು. ಅಕ್ಕಿ ಲೋಡ್‌ನ್ನು ಇಳಿಸದೇ ವಂಚಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜುನಾಥ ಲಾರಿ ಡ್ರೈವರ್ ಮತ್ತು ಪರಶು ರಾಮ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 16.11 ಲಕ್ಷ ಮೌಲ್ಯದ 957 ಅಕ್ಕಿ ಚೀಲ ಮತ್ತು ಲಾರಿಯನ್ನು ವಶಕ್ಕೆ ಪಡೆದುಕೊಂಡಿದೆ.
ತಾಲೂಕಿನ ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯ ರಾಯಚೂರು-ಗದ್ವಾಲ್ ಮತ್ತು ಚಿಕ್ಕಸೂಗುರು ಗ್ರಾಮದ ಹತ್ತಿರವಿರುವ 4 ರೈಸಮಿಲ್ಗಳಿಂದ 1200 ಅಕ್ಕಿ ಚೀಲಗಳು ಸುಮಾರು 19,77,650 ರೂ ಬೆಳೆಬಾಳುವ ಅಕ್ಕಿ ಚೀಲಗಳನ್ನು ಲೋಡ್ ಮಾಡಿಕೊಂಡು ಜೂನ್
26, 27, 28 ರಂದು ಕೆ.ರಾಘವೇಂದ್ರ ಅಲಿಯಾಸ್ ರಘು ಮತ್ತು ಮಂಜುನಾಥ, ಕೆ.ಎಂ.ಪ್ರಶಾಂತ್ ದಾವಣಗೇರಾ, ಇಸ್ಮಾಯಿಲ್ ಖಾನ್ ಇವರು ಕೂಡಿಕೊಂಡು ಲಾರಿ ಸಂಖ್ಯೆ ಎಪಿ 04-ಟಿಯು-0523 ಇದ್ದು, ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿ ಮತ್ತು ಚಿಕ್ಕಸೂಗುರು ಗ್ರಾಮದ ಹತ್ತಿರ ಬರುವ ಎಮ್.ಅರ್.ಎನ್. ಅಗೋ ಇಂಡಸ್ಟ್ರೀಸ್, ಪೂರ್ಣಸಾಯಿ ಆಕ್ರೋ ಇಂಡಸ್ಟ್ರೀಸ್, ಶ್ರೀ ಅನ್ನಪೂರ್ಣ ಆಕ್ರೋ ಇಂಡಸ್ಟ್ರೀಸ್, ಎಸ್.ಎಲ್. ಎನ್ ಆಗೋ ಇಂಡಸ್ಟ್ರೀಸ್ ಈ 4 ರೈಸ್ ಮಿಲ್ಲುಗಳಿಂದ ಸುಮಾರು 313.82 ಕ್ವಿಂಟಲ್ ಒಟ್ಟು 1200 ಅಕ್ಕಿ ಚೀಲಗಳು ಸುಮಾರು 19,77.650 ಮೌಲ್ಯದ ಬೆಲೆ ಬಾಳುವುದಾಗಿದೆ. ಲಾರಿಯಲ್ಲಿ ರಾಯಚೂರಿನಿಂದ ತುಂಬಿಕೊಂಡು ಹೋಗಿ ಮೈಸೂರು ಮತ್ತು ಮಳವಳ್ಳಿ ಕಡೆಗೆ ಅಕ್ಕಿ ಲೋಡ್ ಇಳಿಸದೇ ವಂಚಿಸಿ ಮೋಸ ಮಾಡಿ ಕಳ್ಳತನ ಮಾಡಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡು ಎಸ್‌ಪಿ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ, ಹಾಗೂ ಡಿಎಸ್‌ಪಿ ಅವರ ಆದೇಶ ಮೇರೆಗೆ ತಂಡ ರಚನೆ ಮಾಡಲಾಗಿತ್ತು.
ಯರಗೇರಾ ಪೋಲಿಸ್ ಠಾಣೆಯ ಸಿಪಿಐ
ನಿಂಗಪ್ಪ ಅವರ ನೇತೃತ್ವದಲ್ಲಿ, ಪಿಎಸ್‌ಐ ಅರುಣ ಕುಮಾರ ರಾಥೋಡ, ಶಾಂತಮ್ಮ ಅವಿನಾಶ ಕಾಂಬಳೆ ಇಡಪನೂರು ಠಾಣೆ ಹಾಗೂ ರಂಗಣ್ಣ ಎ.ಎಸ್.ಐ, ಸಿಬ್ಬಂದಿಯವರಾದ ಚಾಂದಪಾಷ ಹನುಮಾನಗೌಡ, ಶಿವರಾಮ, ನರಸಿಂಹಲು, ಚಂದ್ರಶೇಖರ, ನಿಜಲಿಂಗಪ್ಪ, ಬಸವರಾಜ ಅಜೀಮ್ ಪಾಶಾ,ಪ್ರಭು ಸೇರಿ ಪೋಲಿಸ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಇದೀಗ ಪ್ರಕರಣವನ್ನು ಬೇದಿಸಲಾಗಿದೆ.
ಆರೋಪಿಗಳಾದ ಮಂಜುನಾಥ,ಲಾರಿ ಡ್ರೈವರ್ ಮತ್ತು ಪರಶುರಾಮ ದಾದಪುರ ಇವರನ್ನು ಬಂಧಿಸಿ ಲಾರಿ ಮತ್ತು 1200 ಅಕ್ಕಿ ಚೀಲಗಳ ಪೈಕಿ 16. 11 ಲಕ್ಷ ಮೌಲ್ಯದ 957 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಬೇದಿಸಿದ ವಿಶೇಷ ತಂಡದ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು
ಶ್ಲಾಘಿಸಿ ನಗದು ಬಹುಮಾನ ನೀಡಿದ್ದಾರೆ.

 

Megha News