ರಾಯಚೂರು. ಮೈಲಾರಿ ನಗರದ ಹತ್ತಿರದಲ್ಲಿ ರುವ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಅನಧಿಕೃ ತವಾಗಿ ಶೆಡ್ ನಿರ್ಮಾಣ ಮಾಡಿದ್ದು ದೂರಿನ ಆಧಾರದ ಮೇಲೆ ನಗರಸಭೆಯ ಸಿಬ್ಬಂದಿಗಳು
ಪೊಲೀಸರ ಮುಂದಾಳತ್ವದಲ್ಲಿ ತೆರವುಗೊ ಳಿಸಿದರು.
ನಗರದ ಮೈಲಾರಿ ನಗರದಲ್ಲಿ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಕೆಲ ಕಿಡಿಗೇಡಿಗಳು ಮಾಜಿ ಶಾಸಕ ಎ ಪಾಪರೆಡ್ಡಿ ಅವರ ಹೆಸರು ಹೇಳಿ ಕೊಂಡು ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದಾರೆ,
ಈ ಕುರಿತು ಸುತ್ತಮುತ್ತಲಿನ ಬಡಾವಣೆಯ ಮುಖಂಡರು ನಗರಸಭೆ ಪೌಯುಕ್ತರಿಗೆ ದೂರು ನೀಡಿದ್ದರು, ತೆರವುಗೊಳಿಸಲು ನಗರಸಭೆ ಪೌರಾಯಕ್ತರು ಆದೇಶದ ಮೇರೆಗೆ ನಗರಸಭೆಯ ಕಂದಾಯ ಅಧಿಕಾರಿ ಮಾರೆಪ್ಪ ಹಾಗೂ ಸಿಬ್ಬಂದಿಗಳು ಪೊಲೀಸರ ಮುಂದಾಳತ್ವದಲ್ಲಿ ತೆರವುಗೊಳಿಸಲಾಯಿತು.
ಕೂಡಲೇ ಅತಿಕ್ರಮ ಮಾಡಿದವರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಂಡು ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರುದ್ರಭೂಮಿಯ ಸುತ್ತಲೂ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಸ್ಥಳಿಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪೊಗುಲು ಶ್ರೀನಿವಾಸ, ಕೆ ಈ ಕುಮಾರ, ಮಾಜಿ ನಗರಸಭೆ ಸದಸ್ಯ ಆರ್, ಬಸ ವರಾಜ, ಎಂ ಮಾರೆಪ್ಪ, ಗೋವಿಂದ ನಾಯಕ, ಭೀಮೇಶ ವಡ್ಡರ್, ಶ್ರೀನಿವಾಸ್ ಎಲ್. ಬಿ. ಲಕ್ಷ್ಮ ಣ ಮ್ಯಾದರ್, ರಾಮು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Megha News > Local News > ಮೈಲಾರಿ ನಗರದ ರುದ್ರಭೂಮಿಯಲ್ಲಿ ಅಕ್ರಮ ಶೆಡ್ ನಿರ್ಮಾಣ ನಗರಸಭೆಯಿಂದ ತೆರವು
ಮೈಲಾರಿ ನಗರದ ರುದ್ರಭೂಮಿಯಲ್ಲಿ ಅಕ್ರಮ ಶೆಡ್ ನಿರ್ಮಾಣ ನಗರಸಭೆಯಿಂದ ತೆರವು
Tayappa - Raichur26/08/2023
posted on
Leave a reply