ರಾಯಚೂರು,ನ.೨೦- ನಗರದ ಸಂತೋಷನಗರ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶಿವ ಮತ್ತು ಗಣೇಶ ದೇವಸ್ಥಾನವನ್ನು ರಾತ್ರೊರಾತ್ರಿ ನಗರಸಭೆ ತೆರವು ಗೊಳಿಸಿದೆ.
ಸರಕಾರಿ ಪ್ರೌಢಶಾಲೆ ನಿರ್ಮಾಣ ಮಾಡಲು ಸಿಎ ಸೈಟ್ ಮಂಜೂರು ಮಾಡಲಾಗಿತ್ತು.ಕೆಲವರು ದೇವಸ್ಥಾನ ನಿರ್ಮಾಣ ಕಬಳಿಸಿದ್ದರು.ದೇವಸ್ಥಾನ ನಿರ್ಮಾಣ ಮಾಡಿ ಭಾವನಾತ್ಮಕವಾಗಿ ಸಮಸ್ಯೆ ಸೃಷ್ಟಿಸಿದ್ದರು.ಹಲವಾರು ಸಂಘಟನೆಗಳು,ವಿದ್ಯಾರ್ಥಿಗಳು ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.ಆದರು ತೆರವುಗೊಳಿಸರಲಿಲ್ಲ.ಮಂಗಳವಾರ ರಾತ್ರಿ ಸಹಾಯಕ ಆಯುಕ್ತ ಗಜಾನನ ಬಾಲೆ ನೇತೃತ್ವದಲ್ಲಿ ಪೊಲೀಸ್ ಬಂದ ರಹಸ್ಯ ನೊಂದಿಗೆ ಅನಧಿಕೃತ ದೇವಸ್ಥಾನ,ಶೆಡ್ ತೆರವು ಗೊಳಿಸಲಾಗಿದೆ.
ನಗರದ ಎಲ್ ಬಿಎಸ್ ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರಾಗಿದ್ದು,ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಸಹ ಬಿಡುಗಡೆಯಾಗಿತ್ತು. ಸ್ಥಳೀಯರು ದೇಗುಲ ತೆರವಿಗೆ ವಿರೋಧಿಸಿದ್ದರು.ಸ್ದಳೀಯರ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯನಡೆಸಲಾಯಿತು
ನಗರಸಭೆ ಪೌರಾಯುಕ್ತ, ಸಿದ್ದಯ್ಯ ಹೀರೆಮಠ, ಹೆಚ್ಚುವರಿ ಎಸ್ ಪಿ ಶಿವಕುಮಾರ್ ಮತ್ತು ಹರೀಶ್3 ಜನ ಡಿವೈಎಸ್ ಪಿಗಳು, 10ಕ್ಕೂ ಹೆಚ್ಚು ಪಿಐನೂರಾರು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.