Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತೆರೆದ ಕೊಳವೆ ಭಾವಿ : ಅಪಾಯಕ್ಕೆ ಆಹ್ವಾನ- ಆತಂಕ

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತೆರೆದ ಕೊಳವೆ ಭಾವಿ : ಅಪಾಯಕ್ಕೆ ಆಹ್ವಾನ- ಆತಂಕ

ರಾಯಚೂರು. ತೆರೆದ ಕೊಳವೆ ಭಾವಿಗಳನ್ನು ಮುಚ್ಚಿರಿ ಎಂದೆಲ್ಲ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದರೂ ಆದರೆ ಆಯಾ ಇಲಾಖೆ ಅಧಿಕಾರಿಗಳು ಮಾತ್ರ ಜೀವ ಬಲಿಗೆ ತೆರೆದು ನಿಂತಿರುವ ಕೊಳವೆಭಾವಿ ಮುಚ್ಚಲು ಮಾತ್ರ ಮುಂದಾಗುತ್ತಿಲ್ಲ.
ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಆವರಣದಲ್ಲಿಯೇ ಎರಡು ಕೊಳವೆಭಾವಿ ಬಾಯಿ ತೆರೆದು ನಿಂತಿವೆ. ರಾಯಚೂರು ತಾಲೂಕೊಂದರಲ್ಲಿಯೇ ೬೦೧ ಕೊಳವೆ ಭಾವಿಗಳು ಮುಚ್ಚದೆ ಹಾಗೆ ಉಳಿದಿವೆ.
ಜಿಲ್ಲೆಯ ನೀರಮಾನವಿಯಲ್ಲಿ ೨೦೦೭ ರಲ್ಲಿ ನಡೆದ ಕೊಳವೆ ಭಾವಿ ದುರ್ಘಟನೆ ನಂತರ ಸರ್ಕಾರ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ತೆರೆದ ಕೊಳವೆ ಭಾವಿ ಮುಚ್ಚಲು ಗಡವು ನೀಡಿತ್ತು. ಮುಚ್ಚದೇ ಹೋದರೆ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿತ್ತು. ಕಾಲಕಾಲಕ್ಕೆ ಎಚ್ಚರಿಕೆ ಸಂದೇಶವನ್ನ ಸರ್ಕಾರ ನೀಡುತ್ತಾ ಬಂದಿದೆ. ಆದರೆ ಕೊಳವೆಭಾವಿ ಏಜೆನ್ಸಿಗಳು, ಆಯಾ ಇಲಾಖೆ ಇಂಜಿನಿಯರಿಗ್ ವಿಭಾಗದ ಅಧಿಕಾರಿಗಳಿಗೆ ಮಾತ್ರ ಜಾಣ ಮರವು ಕಾಡುತ್ತಿದೆ. ಅವಘಡಗಳು ಸಂಭವಿಸದಾಗದೇ ತನಿಖೆ, ಕ್ರಮ ಎಚ್ಚರಿಕೆ ಮಾತುಗಳು ಕೇಳಿಬರುತ್ತವೆ. ನಂತರ ಯಥಾಸ್ಥಿತಿ! ನಗರದ ಆರೋಗ್ಯ ಇಲಾಖೆ ಆವರಣದಲ್ಲಿ ಎರಡು ಕೊಳವೆಭಾವಿ ಮುಚ್ಚದೇ ಹಾಗೆ ಬಿಡಲಾಗಿದೆ. ಇಲಾಖೆ ಒಂದು ಬದಿಯಲ್ಲಿ ಜನಸಂಚಾರ ಇಲ್ಲವಾದರೂ ಅಪಾಯ ತಡೆಯಲು ಎಚ್ಚರಿಕೆವಹಿಸಬೇಕಿತ್ತು. ಆದರೆ ಇಲಾಖೆ ನಿರ್ಲಕ್ಷö್ಯ ಎದ್ದು ಕಾಣುತ್ತಲಿದೆ.
ಇತ್ತೀಚಗಷ್ಟೇ ವಿಜಯಪುರು ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಕೊಳವೆಭಾವಿಗೆ ಬಿದ್ದ ಬಾಲಕ ಸಾತ್ವಿಕ್ ಬದುಕುಳಿದು ಬಂದಿರುವದೇ ವಿಸ್ಮಯ.ಎಚ್ಚರಿಕೆ ಗಂಟೆಯಾದ ಘಟನೆಗಳಿಂದ ಎಚ್ಚೆತ್ತಕೊಳ್ಳಬೇಕಾದ ಆಡಳಿತ ನಿರ್ಲಕ್ಷö್ಯಮುಂದುವರೆದಿರುವದು ಆತಂಕಕಾರಿ. ಜಿಲ್ಲಾ ಪಂಚಾಯ್ತಿ ಇಂಜಿನಿಯರಿAಗ್ ಇಲಾಖೆ ನಡೆಸಿರುವ ಸಮೀಕ್ಷೆಯಂತೆ ಸರ್ಕಾರಿ ಮತ್ತು ಖಾಸಗಿ ಕೊಳವೆ ಭಾವಿ ತೆರೆದಿರುವ ಕುರಿತು ವರದಿ ಪಡೆದು ವರ್ಷಗಳೇ ಉರುಳಿವೆ. ಕುಡಿಯುವ ನೀರು, ಕೃಷಿಗೆಬಳಸಲು ಸರ್ಕಾರಿ ಕಚೇರಿಗಳು ಸೇರಿದಂತೆ ಜಮೀನುಗಳಲ್ಲಿರುವ ತೆರೆದ ಕೊಳವೆಭಾವಿಗಳನ್ನು ಮುಚ್ಚುವ ಕೆಲಸವಾಗ ಇರುವದರಿಂದ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.

ಆದರೂ ತೆರದ ಕೊಳವೆ ಭಾವಿ ಮುಚ್ಚುವದು ಗಂಬೀರವಾಗಿ ಪರಿಗಣನೆಯಾಗದೇ ಇರುವದು ಕಳವಳಕಾರಿ. ಇನ್ನಷ್ಟು ಬಲಿಗಾಗಿ ತೆರೆದ ಕೊಳವೆ ಕಾದಿವೆ ಎಂದು ಭೀತಿ ಪಡುವಂತಹದ್ದಾಗಿದೆ.
ಆರೋಗ್ಯ ಇಲಾಖೆ ಆವರಣದಲ್ಲಿದ್ದ ಎರಡು ತೆರೆದ ಕೊಳವೆ ಸ್ಥಳಕ್ಕೆ ಸಾರ್ವಜನಿಕರು ಗಮನಿಸುತ್ತಲೇ ಎಚ್ಚೆತ್ತಕೊಂಡು ಇಲಾಖೆ ಮುಚ್ಚುವ ಕೆಲಸ ಮಾಡಿದೆ. ಇನ್ನೂ ಮಾಹಿತಿಗೆ ಬಾರದ ಎಷ್ಟು ಕೊಳವೆಭಾವಿ ಇವೆಯೋ ಎನ್ನುವ ಅನುಮಾನಗಳಿಗೆ ಉತ್ತರ ದೊರಕದೇ ಹೋಗಿದೆ.

Megha News