ರಾಯಚೂರು. ಜಿಲ್ಲಾ ಕಬ್ಬಡಿ ಅಸೋಸಿಯೇ ಷನ್ ಆದೇಶ ಮೇರೆಗೆ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪದಗ್ರಹಣ ಕಾರ್ಯಕ್ರಮವನ್ನು ಯರಮರಸ್ ಸರ್ಕಿಟ್ ಹೌಸ್ ನಲ್ಲಿ ರಾಯಚೂರು ತಾಲೂಕು ಅಮೆ ಚೂರ್ ಕಬಡ್ಡಿ ಅಸೋಸಿಯೇಷನ್ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಲಿಂಗಸೂರು ಮಾತನಾಡಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದ ಹಿಂದುಳಿದ ಕಬಡ್ಡಿ ಕ್ರೀಡಾ ಪಟುಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸುವಂತಾಗಬೇಕು ಎಂದರು.
16 ವಯಸ್ಸಿನ ಒಳಗೆ ಮತ್ತು 20 ವಯಸ್ಸಿನ ಒಳಗೆ ಹಾಗೂ ಮೇಲ್ಪಟ್ಟು ಪುರುಷರು, ಮಹಿಳೆಯರು ಕಬಡ್ಡಿ ಆಯ್ಕೆ ಪ್ರಕ್ರಿಯೆ ಇದ್ದು, ಹಾಗಾಗಿ ತಾಲ್ಲೂಕಿನ ಎಲ್ಲಾ ಗ್ರಾಮೀಣ ಭಾಗದ ಮಕ್ಕಳು ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ರಾಯಚೂರು ತಾಲ್ಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಪದಾಧಿಕಾರಿಗಳ ಪದಗ್ರಹಣದಲ್ಲಿ ಸನ್ಮಾನಿಸಲಾಯಿತು.
ಡಾ: ಪ್ರಕಾಶಯ್ಯ ನಂದಿ ರಾಷ್ಟ್ರ ಪ್ರಶಸ್ತಿ ವಿಜೇತರು ಇವರು ಒಳ್ಳೆಯ ಗುರು ಇದ್ದಾಗ ಗುರಿಯನ್ನು ಮುಟ್ಟಲು ಸಾದ್ಯ ಎಲ್ಲಾ ಕ್ರೀಡಾ ಪಟುಗಳಿಗೆ ಯಾವದೇ ದುಶ್ಚಟಗಳಿಗೆ ಬಲಿಯಾ ಗದೆ ಒಳ್ಳೆಯ ಕ್ರೀಡಾಪಟುವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೂಗಪ್ಪ ಎನ. ಕರಾಟೆ ಮಾಸ್ಟರ್, ಜೇರೆಡ್ಡಿ ಸೂಗಮ್ಮ, ಶೋಭಾ ಮೇಡಂ, ಯಲ್ಲೇಶ, ಸುರೇಶ, ಆನಂದ ನಿಂಗದಳ್ಳಿ, ದೇವಪ್ಪ ಸುರೇಶ ಪೂಜಾರಿ ಹಾಗೂ ಸಂನಗಣ್ಣ ಅವರು ನೀರೂಪಿಸಿದರು.