ರಾಯಚೂರು.ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರು ತಾಲೂಕಿನ ವಿವಿಧ ಹೋಬಳಿ ಗಳಲ್ಲಿ ಹತ್ತಿ ಮತ್ತು ತೊಗರಿ ಬೆಳೆಯ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿದರು.
ತಾಲ್ಲೂಕಿನ ಮಿಟ್ಟಿ ಮಲ್ಕಪುರ ಸೇರಿದಂತೆ ವಿವಿ ಧೆಡೆ ಸಂಚರಿಸಿ ಬರಪೀಡಿತ ಹತ್ತಿ ಬೆಳೆ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ನರಸಿಂಹಲು ಎಂಬುವರ ಜಮೀನಿಗೆ ಭೇಟಿ ನೀ ಡಿದ ಸಚಿವರು ಇದೆ ವೇಳೆ ಅಲ್ಲಿನ ರೈತರ ಸಮಸ್ಯೆ ಆಲಿಸಿದರು.
ಸರ್ಕಾರದ ಪರಿಹಾರ ನಿರೀಕ್ಷೆ ಮಾಡುವ ಜೊತೆಗೆ ರೈತರು ಪ್ರತಿವರ್ಷವೂ ಬೆಳೆ ವಿಮೆ ಮಾಡಿಸು ವುದು ಅಗತ್ಯ ಎಂದು ಸಚಿವರು ಸಲಹೆ ಮಾಡಿದರು.
ಇದೇ ವೇಳೆ ರೈತರು ಉಳಿದ ಬೆಳೆಗಳ ಬಿತ್ತನೆ ಬೀಜಗಳಿಗೆ ನೀಡುವ ರೀಯಾಯಿತಿಯನ್ನೂ ಬಿಟಿ ಹತ್ತಿ ಬೀಜಕ್ಕೂ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಇಲಾಖೆಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕೃತ ದತ್ತಾಂಶವೊಂದರ ಆಧಾರದ ಮೇಲೆ ಭಾರತೀಯ ಹತ್ತಿ ಕಾರ್ಪೊರೇಷನ್ ವತಿಯಿಂದ ರೈತರು ಬೆಳೆದ ಹತ್ತಿಯನ್ನು ಕನಿಷ್ಟ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕನಿಷ್ಟ ಬೆಂಬಲ ಬೆಲೆ ನಿಗದಿಮಾಡಲು ರಚಿಸಿದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಇದೆ ವೇಳೆ ಸಚಿವರು ರೈತರಿಗೆ ತಿಳಿಸಿದರು.
ಅಪರ ಕೃಷಿ ನಿರ್ದೇಶಕರಾದ ವೆಂಕಟರಮಣ ರೆಡ್ಡಿ, ರಾಯಚೂರು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.