ರಾಯಚೂರು. ಒಳ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇಲ್ಲಿ ಯವರೆಗೆ ಯಾವ ಪ್ರಧಾನಮಂತ್ರಿ ಭರವಸೆ ನೀಡಿಲ್ಲ ಆದರೆ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದು, ಒಳ ಮೀಸ ಲಾತಿ ಜಾರಿಗೆ ನನಸಾಗುವಂತಾಗಿದೆ ಎಂದು ವಿಜಯಪುರದ ಸಂಸದ ರಮೇಶ ಜಿಗಜಿವಣಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನವಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಎಜೆ ಸದಾಶಿವ ಆಯೋಗದ ವರದಿ ಜಾರಿಗೆ ಕಳೆದ 30 ವರ್ಷಗಳಿಂದ ನಮ್ಮಿಂದಲೇ ಆರಂಭವಾಗಿದೆ, ಇದೀಗ ಒಳ ಮೀಸಲಾತಿ ಜಾರಿಗೆ ನಮ್ಮಿಂದಲೇ ನಾಂದಿ ಹಾಡಬೇಕಾಗಿದೆ, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರು ಒಳ ಮೀಸಲಾತಿಗೆ ಭರವಸೆ ನೀಡಿದ್ದಾರೆ, ಒಳ ಮೀಸಲಾತಿ ಸಮಾಜದ ಕನಸು ನನಸಾಗಲಿದೆ ಎಂದರು.
ರಾಜ್ಯದಲ್ಲಿ ಇಲ್ಲಿಯವರೆಗೆ ಒಳ ಮೀಸಲಾತಿಗೆ ಸದಾಶಿವ ಆಯೋಗದ ವರದಿ ಕುರಿತು ಯಾವ ಮುಖ್ಯಮಂತ್ರಿಗಳು ಮಾತನಾಡಿಲ್ಲ, ಈ ಹಿಂದೆ ಬಿಎಸ್ವೈ, ನದಾನಂದ ಗೌಡ, ಬೊಮ್ಮಾಯಿ ಅವರು ಮೀಸಲಾತಿ ವರ್ಗೀಕರಿಸಿ ಶಿಫಾರಸ್ಸು ಮಾಡಿದ್ದಾರೆ ಎಂದರು.