ರಾಯಚೂರು,ಏ.೨- ನಗರದ ಈಶ್ವರ ನಗರದ ನಿವಾಸಿ ವೀರೇಶನ ಸಾವಿಗೆ ಪಶ್ಚಿಮ ಠಾಣೆಯ ಪಿಎಸ್ಐ ಮತ್ತು ಸಿಪಿಐ ಹೊಡೆದ್ದರಿಂದ ಸಾವು ಸಂಭವಿಸಿದೆ ಎಂದು ಮೃತನ ಸಹೋದರಿ ಜ್ಯೋತಿ ನೀಡಿದ ದೂರಿನಮೇರೆಗೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರೇಶ ನಾಲ್ಕು ವರ್ಷಗಳ ಹಿಂದೆ ನರಸಮ್ಮ ಎಂಬುವರನ್ನು ಮದುವೆಯಾಗಿ ಎರಡುಮಕ್ಕಳಿವೆ.ಗಂಡ ಮತ್ತು ಹೆಂಡತಿ ಜಗಳವಾಡಿಕೊಂಡಿದ್ದು ಸದರ ಬಜಾರ ಮಹಿಳಾ ಠಾಣೆಗೆ ದೂರು ನೀಡಿದ್ದಳು.ಪೊಲೀಸರು ವಿಚಾರಣೆ ನಡೆಸದೇ ಹಲ್ಲೆ ಮಾಡಿದ್ದರು. ನಂತರ ಪಶ್ಚಿಮ ಠಾಣೆಗೆ ವರ್ಗಾಯಿಸಿದ್ದರಿಂದ ಪಿಎಸ್ಐ ಮತ್ತೆ ಹಲ್ಲೆ ಮಾಡಿ ಬೂಟಗಾಲಿನಿಂದ ಒದ್ದು ಎರಡು ಕಾಲುಗಳಿಗೆ ಕರೆಂಟ ಶಾಕ್ ನೀಡಿ ಗಾಯಗೊಳಿಸಿದ್ದರು.ಸಿಪಿಐ ಸಹ ಬಂದು ಒದ್ದಿರಿಂದ ಗಾಯಗೊಂಡಿದ್ದ. ಹಲ್ಲೆಯಿಂದ ಚಿಕಿತ್ಸೆಗೆ ಅಸ್ಪತ್ರೆ ದಾಖಲಿಸಲಾಗಿತ್ತು.ಚಿಕಿತ್ಸೆ ಪಡಡೆಯುತ್ತಿರುವಾಗ ಮೃತಪಟ್ಟಿದ್ಸಾನೆ ಸಾವಿಗೆ ಪೊಲೀಸರು ನಡೆಸಿದ ಹಲ್ಲೆಯೇ ಕಾರಣವಾಗಿದ್ದು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೧೧೫(೧), ೧೧೮(೧),೧೩೩,೩೫೨, ೧೦೩(೧), ಬಿಎನ್ ಎಸ್ ೨೦೧೩, ಎಸ್ಸಿಎಸ್ಡಿ ತಿದ್ದುಪಡಿ ಕಲಂಗಳ ಅನ್ವಯ ಕೇಸ್ ದಾಖಲಾಗಿದೆ.