ರಾಯಚೂರು. ನಿವೇಶನ ಸ್ವಚ್ಚಗೊಳಿಸುವ ವೇಳೆ ಜೆಸಿಬಿಯಿಂದ ಮಣ್ಣಿನ ರಾಶಿ ಹಾಕಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಆಶಾಪೂರು ರಸ್ತೆಯ ಜನತಾ ಕಾಲೋನಿಯಲ್ಲಿ ನಡೆದಿದೆ.
ತಾಯಮ್ಮ(೩೨) ಎಂಬ ಮಹಿಳೆ ಸಾವನ್ನಪ್ಪಿದ್ದಾಳೆ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಬೆಳೆದಿದ್ದು, ಜೆಸಿಬಿಯಿಂದ ಸ್ವಚ್ಚಗೊಳಿಸುವ ವೇಳೆ ಜಾಲಿ ಗಿಡದಡಿ ಬಯಲು ಶೌಚಕ್ಕೆ ಹೋಗಿದ್ದ ಮಹಿಳೆ ಮೇಲೆ ಜೆಸಿಬಿಯಿಂದ ಮಣ್ಣು ಹಾಕಿದ್ದರಿಂದ ಉಸಿರು ಗಟ್ಟಿ ಸಾವನ್ನಪ್ಪಿದ್ದಾಳೆ.
ಜನತಾ ಕಾಲೋನಿ ಬಡಾವಣೆ ಕೆಲ ಬಡ ಮಹಿಳೆಯರು ಖಾಲಿ ಇರುವ ನಿವೇಶನದಲ್ಲಿ ಬಯಲುಶೌಚಕ್ಕೆ ಹೋಗುತ್ತಾರೆ. ಆದರೇ ಜೆಸಿಬಿ ಚಾಲಕ ಮಹಿಳೆ ಕುಳಿತಿರುವುದನ್ನು ಗಮನಿಸದೆ ಮಣ್ಣು ಹಾಕಿದ್ದು, ಉಸಿರಾಟ ಸಮಸ್ಯೆಯಿಂದ ಮಹಿಳೆ ಸಾವಿಗೀಡಾಗಿದ್ದಾಳೆ.
ಘಟನಾ ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಜೆಸಿಬಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.