ರಾಯಚೂರು. ನಗರದ ತಹಶಿಲ್ದಾರ್ ಕಚೇರಿ ಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇಲ್ಲಿ ಹಣ ಕೊಟ್ಟರೆ ಮಾತ್ರ ಫೈಲ್ ಮತ್ತು ಇತರೆ ಪ್ರಮಾಣ ಪತ್ರಕ್ಕೆ ಸಹಿ ಹಾಕೋದು ಇಲ್ಲಂದ್ರೆ ಡೋಂಟ್ ಕೇರ್ ಅಂತಾರೆ.
ರಾಯಚೂರಿನ ತಹಶಿಲ್ದಾರ್ ಕಚೇರಿಯ ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸು ವುದು ಸೇವೆ ಬಂದವರ ಕರ್ತವ್ಯ ಆದರೆ ಇವರಿಗೆ ಮಾತ್ರ ಹಣ ಕೊಟ್ಟರೆ ಮಾತ್ರ ಕೆಲಸವಂತೆ, ಇಲ್ಲದಿದ್ದರೆ ಸಹಿ ಮಾಡಲ್ವಂತೆ ಈ ಬಗ್ಗೆ ದೂರು ಕೊಟ್ಟರೆ ಯಾರಿಗಾದರೂ ಹೇಳಿ ಎಂದು ದರ್ಪ ತೋರಿಸುತ್ತಿದ್ದಾರೆ, ಅಂದ ಹಾಗೆ ಇವರು ತಹಶಿಲ್ದಾರ್ ಕಚೇರಿಯಲ್ಲಿನ ಪಡಸಾಲೆ
ಉಪ-ತಹಸೀಲ್ದಾರ್ ಶಶಿಕಲಾ ಇವರ ಬಳಿ ಕೆಲಸ ಮಾಡಿಸಿಕೊಳ್ಳಲು ಹಣ ಕೈಯಲ್ಲಿಟ್ಟುಕೊಂಡೇ ಹೋಗಬೇಕು, ಇಲ್ಲಂದ್ರೆ ಕೆಲಸ ಆಗಲ್ವಂತೆ,
ಸಾರ್ವಜನಿಕರೊಬ್ಬರು ಸಹಿ ಪಡೆಯಲು ಹಣ ಕೊಡುತ್ತಿರುವ ವೇಳೆ ಸಿಕ್ಕಿ ಬಿದ್ದಿದ್ದಾರೆ, ಲಂಚದ ಹಣವನ್ನು ಪಡೆಯಿತ್ತಿರುವಾಗ ಕಿಟಕಿಯಿಂದ ಕೆಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಟೇಬಲ್ ನ ಡ್ರಾವರ್ ಓಪನ್ ಮಾಡಿಸಿದಾಗ ಅದರಲ್ಲಿ 500 ರೂ ನೋಟುಗಳು ಪತ್ತೆಯಾಗಿವೆ,
ಹಣವನ್ನು ಎತ್ತಿ ತಮ್ಮ ಕೈಯಲ್ಲಿಟ್ಟುಕೊಂಡು ಮರೆ ಮಾಚಿದ್ದಾರೆ.
ತಹಶಿಲ್ದಾರ್ ಕಚೇರಿಯಲ್ಲಿ ಲಂಚಾವತಾರ ತಂಡವವಾಡುತ್ತಿದೆ, ಈ ಬಗ್ಗೆ ತಹಶಿಲ್ದಾರ್ ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸೇವೆ ನೀಡಬೇಕಾಗಿದೆ.