ರಾಯಚೂರು.ಜನನಿ ಕಲಾ ಮತ್ತು ಸಾಂಸ್ಕೃತಿಕ ಯುವ ಬಳಗದ ವತಿಯಿಂದ ಯಕ್ಲಾಸಪೂರ ಗ್ರಾಮ ದಲ್ಲಿ ಕಾರ್ತಿಕ ಸಂಗಿತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾದರ ಚನ್ನಯ್ಯ ಗುರುಪೀಠದ ಅನ್ನವಿರಯ್ಯ ಸ್ವಾಮಿ ಅವರು ತಬಲಾ ಭಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿ, ಪ್ರಪಂಚದಲ್ಲಿರುವ ಎಲ್ಲಾ ಸಂಗೀತಗಳಿಂತ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದ್ದು, ಸಂಗೀತವನ್ನು ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆದರೆ, ಭಾರತೀಯ ಸಂಗೀತ ಪರಂಪರೆ ಪೂಜ ನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಆಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು.
ಸಂಗೀತದ ಮೂಲಕ ಭಗವಂತ ಮತ್ತು ಆಧ್ಯಾತ್ಮವನ್ನು ಒಲಿಸಿಕೊಳ್ಳುವ ಶಕ್ತಿ ಭಾರತೀಯ ಪರಂಪರೆಗಿದ್ದು, ಸಂಗೀತದಲ್ಲಿ ರಾಗವೇ ಅಭಿವ್ಯ ಕ್ತಿಯಾಗಿರಲಿದೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದರು.
ವಿಜಯ್ ಕುಮಾರ್ ದಿನ್ನಿ ಮಾತನಾಡಿ, ಸಂಗೀತ ಇಂದು ಮಾನವಕುಲಕ್ಕೆ ಭಗವಂತನಿಂದ ದೊರೆ ತಿರುವ ಒಂದು ಅಮೂಲ್ಯ ಸಂಪತ್ತು. ಸಂಗೀತದ ಮೂಲಕ ಮನುಷ್ಯ ಒತ್ತಡಮುಕ್ತನಾಗಬಹುದು. ಭಗವಂತನೊಂದಿಗೆ ಏಕರೂಪತೆ ಅನುಭ ವಿಸಬಹುದು; ಆದರೆ ಈಗ ಸಂಗೀತಕ್ಕೆ ಅಶಾಂತಿ ಮತ್ತು ನಾಶದ ಮಾಧ್ಯಮವನ್ನಾಗಿ ಮಾಡಲಾ ಗುತ್ತಿದೆ, ಹೀಗೆಂದು ಜಗತ್ತಿನಾದ್ಯಂತ ಇರುವ ಸಮಾಜಶಾಸ್ತ್ರಜ್ಞರು ನಿರಂತರ ಕಳವಳ ವ್ಯಕ್ತಪಡಿಸುತ್ತಿರುತ್ತಾರೆ.
ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿ ಮಾತ್ಯ ಸಂಗೀತದ ತುಲನೆಯಲ್ಲಿ ವಿವಿಧ ರೀತಿ ಯ ಕಾಯಿಲೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಪರಿಣಾಮ ಕಾರಿ ಆಗಿದೆಯೆಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ, ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ , ಎ. ಎಸ್. ಸುರೇಶ.ಮಹಾಲಕ್ಷ್ಮಿ. ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.