ರಾಯಚೂರು. 2024 ರಿಂದ 29 ರವರೆಗೆ ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನಡೆದಿದ್ದು, ಒಟ್ಟು 72 ನಿರ್ದೇಶಕರ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಆಹಾರ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ ಅವರು ಆಯ್ಕೆಯಾಗಿದ್ದಾರೆ. ರಾಜ್ಯ ಪರಿಷತ್ ಸದಸ್ಯರಾಗಿ ಎಸ್ ಎನ್ ವುಲ್ ಹಕ್, ಜಿಲ್ಲಾ ಕೋಶಾಧ್ಯಕ್ಷರಾಗಿ ಪ್ರಸನ್ನ ಕುಮಾರ ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಆಂಜನೇ ಯ ಕಾವಲಿ ಅವರಿಗೆ ಕೇವಲ 6 ಮತಗಳು ಪಡೆದಿದ್ದು, ಕೃಷ್ಣ ಅವರಿಗೆ 43 ಮತಗಳು ಪಡೆದು ಕೊಂಡಿದ್ದಾರೆ. ಹಾಗೂ ಮಾಂತೇಶ್ ಬಿರಾದಾರ್ ಅವರು 22 ಮತಗಳು ಪಡೆದುಕೊಂಡಿರುತ್ತಾರೆ.
ಅತಿ ಹೆಚ್ಚು ಮತ ಪಡೆದ ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೃಷ್ಣ ಅವರು ಜಯಶಾಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಾ. ಶಂಕರ್ ಗೌಡ ನೇತೃತ್ವದ ಪ್ಯಾನೆಲ್‌ಗೆ ಪೂರ್ಣ ಬಹುಮತ ಪಡೆದುಕೊಂಡು ಜಯಭೇರಿ ಬಾರಿಸಿದೆ.
ಸರ್ಕಾರಿ ನೌಕರ ಸಂಘದ ಚುನಾವಣೆಯು ಬಹಳಷ್ಟು ಜಿದ್ದಾಜಿದ್ದಿನಿಂದ ನಡೆದಿತ್ತು.
ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಈ ಅಭೂತಪೂರ್ವ ಗೆಲುವು ಎಲ್ಲ ಸರ್ಕಾರಿ ನೌಕರರ ಗೆಲುವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲ ನೌಕರರು ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸೌಹಾರ್ದ ಯುತವಾಗಿ ಸೇವೆ ಮಾಡೋಣ ಎಂದು ಹೇಳಿದರು.