ರಾಯಚೂರು : ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ್ ನಾಯಕ್ ಅವರ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ , ಅವರು ಜಿಲ್ಲಾಧಿಕಾರಿಗಳಾಗಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜಿಲ್ಲೆಗೆ ಒಂದೇ ಒಂದು ಮಹತ್ವದ ಕೊಡುಗೆ ನೀಡಿಲ್ಲ. ಕೆ.ಪಿ.ಟಿ.ಸಿ.ಎಲ್ ಮುಖ್ಯಸ್ಥರಾಗಿದ್ದಾಗ ಅದರ ಭೂಸಂತ್ರಸ್ತರಿಗೆ ಹಣ ನೀಡದೆ, ಉದ್ಯೋಗ ನೀಡದೆ ವಂಚಿಸುವ ಮೂಲಕ ಜಿಲ್ಲೆಗೆ ಅನ್ಯಾಯವೆಸಿದ್ದಾರೆ ಇಂತವರನ್ನು ಜಿಲ್ಲೆಯ ಜನರು ತಿರಸ್ಕಾರ ಮಾಡಬೇಕಿದೆ ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಯಚೂರು ನಗರದ ಜೆಡಿಎಸ್ – ಬಿಜೆಪಿ ಪಕ್ಷದ ಕಾರ್ಯ ಕರ್ತರ ಸಮನ್ವಯ ಸಭೆಯಲ್ಲಿ ಮಾತನಾ ಡಿದವರು.
ಅಮರೇಶ್ವರ್ ನಾಯಕ ಅವರು ಮನೆತನದಿಂದ ಬಂದವರು, ಅವರು ಕಡಿಮೆ ಮಾತಾಡುವ ಸ್ವಭಾವವನ್ನು ಹೊಂದಿದವರು ಹಾಗಾಗಿ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಶಾಸಕರಾಗಿ ಸಚಿವರಾಗಿ ಹಲವಾರು ಯೋಜನೆಗಳನ್ನು ತಂದವರು,
ಕಳೆದ ಐದು ವರ್ಷದಲ್ಲಿ ಉಭಯ ಜಿಲ್ಲೆಗಳಲ್ಲಿ 34 ಸಾವಿರ ಕೋಟಿ ಅನುದಾನ ತರುವ ಮೂಲಕ ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ.ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿಜಿಯವರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಉಭಯ ಪಕ್ಷದ ಕಾರ್ಯಕರ್ತರು ಸಮನ್ವಯ ದಿಂದ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಿ ದಾಗ ನಮ್ಮ ಅಭ್ಯರ್ಥಿ ಗೆಲ್ಲಲು ಸಾಧ್ಯವೆಂದರು.
ರಾಜ್ಯದಲ್ಲಿ ಗ್ಯಾರೆಂಟಿಗಳಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ, ದೂರದೃಷ್ಟಿಯಿಲ್ಲದ ಯೋಜನೆಗಳಿಂದ ಜನರ ಮೇಲೆ ಅಧಿಕ ತೆರಿಗೆಯ ಹೊರೆ ಬಿದ್ದಿದೆ , ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಗ್ಯಾರೆಂಟಿ , ಈ ಚುನಾವಣೆಯ ನಂತರ ಐದು ಗ್ಯಾರೆಂಟಿಗಳು ರದ್ದಾಗುವುದು ಗ್ಯಾರೆಂಟಿ ಎಂದರು.
ಸಣ್ಣ ಪುಟ್ಟ ತಪ್ಪುಗಳಿದ್ದರೆ ಮನ್ನಿಸಿ ಚುನಾ ವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಅಮರೇಶ್ವರ್ ನಾಯಕ್ ,ಜಿಲ್ಲಾಧ್ಯಕ್ಷರಾದ ಡಾ.ಎಸ್.ಶಿವರಾಜ್ ಪಾಟೀಲ್ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ, ಕಡಗೋಲು ಆಂಜನೇಯ್ಯ, ಜೆಡಿಎಸ್ ಮುಖಂಡರಾದ ಉಟ್ಕೂರು ರಾಘವೇಂದ್ರ ನಗರಾಧ್ಯಕ್ಷರು , ತಿಮ್ಮಾರೆಡ್ಡಿ ಜೆಡಿಎಸ್ ನಗರಾಧ್ಯಕ್ಷರು, ನಿಕಟಪೂರ್ವ ಬಿಜೆಪಿ ಅಧ್ಯಕ್ಷರಾದ ರಾಮನಂದ ಯಾದವ್ , ರವೀಂದ್ರ ಜಲ್ದಾರ್, ಲಲಿತಾ ಕಡಗೋಲು ಮಹಿಳಾ ಜಿಲ್ಲಾ ಧ್ಯಕ್ಷರು, ಶಿವಶಂಕರ್ ವಕೀಲರು, ಗಾಣಧಾಳ್ ಲಕ್ಷ್ನೀಪತಿ ಡಾ.ನಾಗರಾಜ್ ಬಾಲ್ಕಿ, ರಾಮ ಚಂದ್ರ ಕಡಗೋಲು, ರವೀಂದ್ರ ಜಲ್ದಾರ್, ಸಂತೋಷ್ ರಾಜಗುರು ಸೇರಿದಂತೆ ಉಭಯ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.