Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್

ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್

ಬೆಂಗಳೂರು: ಈ ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಪ್ರಾಂತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್ ಹೇಳಿದರು.

ಮೂರನೇ ದಿನದ ಮಹಾಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನರೇಂದ್ರ ಮೋದಿ ಸರ್ಕಾರ ಬಂದು 10 ವರ್ಷಗಳನ್ನು ಪೂರೈಸುತ್ತಿದೆ. ಈ ಅವಧಿಯಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂದು ಕಾರ್ಮಿಕ ಮತ್ತು ರೈತ ಸಮುದಾಯ ನೋಡುತ್ತಿದೆ. ನಾವು ಯಾವುದೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರೆ ನಾವು ಓಟಿನ ಜೊತೆಗೆ ತೆರಿಗೆ ನೀಡುತ್ತಿದ್ದೇವೆ. ಬಡವರು ಎಂದು ಹೇಳುವ ಬಿಪಿಎಲ್ ಕಾರ್ಡ್‌ ದಾರರು ಕೂಡಾ ಈ ಎರಡೂ ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದೇವೆ. ತೆರಿಗೆ ಹಣ ನೀಡುವ ನಾವು ಇಲ್ಲಿ ನಮ್ಮ  ಹಕ್ಕನ್ನು ಕೇಳಲು ಬಂದಿದ್ದೇವೆ, ಭಿಕ್ಷೆ ಕೇಳಲು ಬಂದಿಲ್ಲ ಎಂದರು.
1% ಶ್ರೀಮಂತರ 2ಲಕ್ಷ ಕೋಟಿಯಷ್ಟು ಆದಾಯ ಹೆಚ್ಚಾಗಿದೆ. ಬಡವರ 50ಲಕ್ಷ ಆದಾಯ ಕಡಿಮೆ ಆಗಿದೆ. ನರೇಂದ್ರ ಮೋದಿ ಸರ್ಕಾರ 10 ವರ್ಷಗಳಲ್ಲಿ 17.5 ಲಕ್ಷ ಕೋಟಿ ಸಾಲ ಮನ್ನಾ ಮಾಡುವುದರ ಮೂಲಕ ನಮ್ಮ ತೆರಿಗೆ ಹಣವನ್ನು ಮಾಡಿದೆ. ಹಾಗಾಗಿ ಶ್ರೀಮಂತರ ಆಸ್ತಿ ಬೆಳೆಯುತ್ತಿದೆ. ಬಡವರಿಗೆ ಒಂದು ಸೈಟು ಕೊಡಲು ಈ ಸರ್ಕಾರದ ಬಳಿ ಭೂಮಿಯಿಲ್ಲ. ಆದರೆ ಕಾರ್ಪೋರೇಟ್‌ ಕಂಪೆನಿಗಳಿಗೆ ಹೆಕ್ಟೇರ್‌ಗಟ್ಟಲೇ ಭೂಮಿ ಹಂಚುತ್ತಿದೆ. ಆದರೆ ಈ ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ ಎಂದು ಹೇಳಿದರು.
ಬಡವರ ಆದಾಯ ಕಡಿತವಾಗುತ್ತಿದೆ. ಕನಿಷ್ಠ ವೇತನ 1000 ನೀಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಆದರೆ ಉತ್ತರ ಕರ್ನಾಟಕದಲ್ಲಿ ಇನ್ನೂ 300 ರೂ. ಜಾಸ್ತಿಯಾಗಿಲ್ಲ. ಕಡಿಮೆ ಕೂಲಿ ನೀಡಿ ಶ್ರೀಮಂತರು ಅವರ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬರಗಾಲದ ಕಾರಣಕ್ಕೆ ಜನರು ಗುಳೆ ಹೋಗುತ್ತಿದ್ದಾರೆ. ಶ್ರಿಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಈ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಜೋಳ, ರಾಗಿ, ತೊಗರಿ ಭತ್ತ ಬೆಳೆಯುವ ರೈತರಿಗೆ ಸ್ವಾಮಿನಾಥನ್ ಬೆಂಬಲ ಬೆಲೆ ನಿಗದಿ ಮಾಡದ ಕಾರಣಕ್ಕೆ ಅವರಿಗೆ ಪ್ರತಿ ವರ್ಷ 25 ಸಾವಿರ ಕೋಟಿ ನಷ್ಟ ಆಗುತ್ತಿದೆ. ದಲಿತ ಮಹಿಳೆಯರಿಗೆ ಜನಸಂಖ್ಯೆಯ ಅನುಗುಣವಾಗಿ ಅನುದಾನ ನೀಡಬೇಕು ಎಂದು ನಾವು ಕೇಳುತ್ತಿದ್ದೇವೆ. ಆದರೆ ಯಾವುದೆ ಸರ್ಕಾರ ಇದನ್ನು ಕೊಡಲು ಸಿದ್ದವಿಲ್ಲ. ಈ ಅನುದಾನ ಸಿಗದೆ ಇರುವುದರಿಂದ ಮಹಿಳೆ ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದರು.
ರೈತರು ಮತ್ತು ಕಾರ್ಮಿಕರ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಚಳವಳಿ ನಡೆಯುತ್ತಿದೆ. ಈ ಚಳವಳಿ ಬೆಳಯುತ್ತಿರುವುದರಿಂದ ಕಾರ್ಪೋರೆಟ್ ಸಂಸ್ಥೆಗಳು ಕೋಮು ಶಕ್ತಿಗಳೊಂದಿಗೆ ಸೇರುತ್ತಿವೆ. ಜೊತೆಗೆ ಸರ್ಕಾರ ಸರ್ವಾಧಿಕಾರದ ಮೂಲಕ ಕಾನೂನು ತರುತ್ತಿದೆ. ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರ ಖಾಯಂ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ನಿರ್ಣಾಯಕವಾಗಿ ಸೋಲಿಸಬೇಕು ಎಂದು ಈ ವೇದಿಕೆ ಮೂಲಕ ನಾವು ವಿನಂತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಐಎನ್‌ಟಿಯುಸಿ ಮುಖಂಡರಾದ ಶಾಮಣ್ಣ ರೆಡ್ಡಿ ಅವರು ಧರಣಿಯಲ್ಲಿ ಮಾತನಾಡಿ ಎಪಿಎಂಸಿ ಕಾಯ್ದೆಯನ್ನು ನಮ್ಮದೆ ಸರ್ಕಾರದ ಸಿದ್ದರಾಮಯ್ಯ ಅವರು ಮಾತು ನೀಡಿದ್ದರು, ಆದರೆ ಅವರು ಇನ್ನೂ ವಾಪಾಸು ಪಡೆದಿಲ್ಲ. ವಾಪಾಸು ಪಡೆಯುವಂತೆ ಈ ವೇದಿಕೆ ಮೂಲಕ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಮುಖ್ಯಮಂತ್ರಿಯವರು ಕಾರ್ಮಿಕ ಸಂಘಟನೆಗಳ ಹಲವಾರು ಹಕ್ಕೋತ್ತಾಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಇದನ್ನು ಮುಖ್ಯಮಂತ್ರಿ ಗಮನಿಸಬೇಕಾಗಿದೆ. ಸೂರಿಲ್ಲದವರಿಗೆ ಸೂರು, ದುಡಿಯುವ ಕೈಗೆ ಕೆಲಸ ಕೊಡಿ. ಬಡವರಿಗೆ 1 ಲಕ್ಷ ಮನೆಗಳನ್ನು ಬೆಂಗಳೂರಿನಲ್ಲಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ ಎಲ್ಲಾ ದುಡಿಯುವ ವರ್ಗಗಳಿಗೆ ಬೆಂಗಳೂರಿನಲ್ಲಿ ಮನೆ ಸಿಗುತ್ತಿಲ್ಲ. ವಲಸೆ ಕಾರ್ಮಿಕರಿಗೆ ವಸತಿ ನೀಡುವುದಕ್ಕೆ ನಿರಾಕರಣೆ ಮಾಡಲಾಗುತ್ತಿದೆ. ಬೆಂಗಳೂರಿನ  ನಿವಾಸಿಗಳಿಗೆ ಮಾತ್ರ ಎಂದು ನಿಯಮ ಮಾಡಲಾಗಿದೆ. ವಸತಿ ಮತ್ತು ನಿವೇಶನ ರಹಿತ ಎಲ್ಲಾ ಕಾರ್ಮಿಕರಿಗೆ ವಸತಿ ಮತ್ತು ನಿವೇಶನ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಇಲ್ಲಿ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೆ ಐಎನ್‌ಟಿಯುಸಿ ಬದ್ದವಾಗಿದೆ ಎಂದು ತಿಳಿಸಿದರು.

Megha News