ರಾಯಚೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ಮತ್ತು ದುರಸ್ತಿಗಾಗಿ ಸರ್ಕಾರ, ಮತ್ತು ಕಲ್ಯಾಣ ಕರ್ನಾಟಕ ಮಂಡಳಿ ಕೋಟಿ ಕೋಟಿ ಅನುದಾನ ಮಾಡುತ್ತದೆ, ಆದರೆ ಜಿಲ್ಲೆಯ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮಾತ್ರ ಸುಧಾರಣೆ ಯಾಗುತ್ತಿಲ್ಲ, ಸಾಕಷ್ಟು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಶಾಲಾ ಕಟ್ಟಡದ ಮೇಲ್ಚಾ ವಣಿ ಬಿದ್ದು ಮಕ್ಕಳು ಬಲಿಯಾಗಿಬೇಕಾಗಿ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಬಹುತೇಕ ಶಾಲೆಗಳು ಶೀಥಿಲಾವಸ್ಥೆ ಯಲ್ಲಿವೆ, ಶಿಕ್ಷಕರು ಮತ್ತು ಮಕ್ಕಳು ಆತಂಕದಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಳೆಗಾಲವಾಗಿದ್ದರಿಂದ ಯಾವಾಗ ಮೇಲೆ ಬಿಳುತ್ತೋ ಎಂದು ಮೇಲೆ ನೋಡಿ ಮಕ್ಕಳ ಪಾಠ ಕೇಳುವಂತಾಗಿದೆ.
ಜಿಲ್ಲೆಯಲ್ಲಿ ಸಾಕಷ್ಟು ಶಾಲೆಗಳು ಶಿಥಿಲದಿಂದಾಗಿ ಮೇಲ್ಛಾವಣಿ ಕುಸಿದು ಮಕ್ಕಳು ಆಸ್ಪತ್ರೆ ಸೇರು ವಂತಾಗಿದೆ. ಇದರಿಂದಾಗಿ ಪೋಷಕರು ಮಕ್ಕಳ ನ್ನು ಶಾಲೆಗೆ ಕಳುಹಿಸಲು ಹಿಂಜಯುತ್ತಿದ್ದಾರೆ.
ರಾಯಚೂರು ತಾಲೂಕಿನಲ್ಲಿ ಒಟ್ಟು 545
ಸರ್ಕಾರಿ, ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಇತರೆ ವಸತಿ ಶಾಲೆಗಳಿವೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 100, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು 105, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳು 21, ಸರ್ಕಾರಿ ಉರ್ದು ಶಾಲೆಗಳು 34, ಸರ್ಕಾರಿ ಪ್ರೌಢಶಾಲೆಗಳು 54 ಒಟ್ಟು 315 ಶಾಲೆಗಳಿಗೆ, ಇನ್ನು ಅನುದಾನಿತ ಕಿರಿಯ, ಹಿರಿಯ ಮತ್ತು ಉರ್ದು, ಹಾಗೂ ಪ್ರೌಢಶಾಲೆಗಳು 26,
ವಸತಿ ಶಾಲೆಗಳು 15, ಅನುದಾನ ರಹಿತ ಕಿರಿಯ ಹಿರಿಯ ಪ್ರಾಥಮಿಕ ಶಾಲೆ 137 ಮತ್ತು
ಪ್ರೌಢಶಾಲೆ 53 ಒಟ್ಟು 545 ಶಾಲೆಗಳಿವೆ.
ಈ ಪೈಕಿ 163 ಸರ್ಕಾರಿ ಶಾಲೆಗಳು ಮೇಜರ್ ಶಿಥಿಲವಾಗಿವೆ, ಉಳಿದ 96 ಶಾಲೆಗಳಲ್ಲಿ ಸಣ್ಣ ಪುಟ್ಟ ರಿಪೇರಿಯಲ್ಲಿವೆ. ಮೇಜರ್ ದುರಸ್ತಿಯ ಲ್ಲಿದ್ದ ಶಾಲೆಗಳಲ್ಲಿ ಮಕ್ಕಳ ಜೀವ ಕೈಯಲ್ಲಿಡಿದು ಶಿಕ್ಷಣ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಶಾಲಾ ಕೊಠಡಿಗಳ ದುರಸ್ತಿ ಮಾಡಬೇಕಾಗದೆ. ಮಳೆಗಾಲವಾಗಿದ್ದರಿಂದ ಮಳೆಗೆ ಮೇಲ್ಛಾವಣಿ ಯ ಮೇಲೆ ನೀರು ನಿಂತು ಸೋರುತ್ತಿವೆ, ಮೇಲ್ಛಾವಣಿಯ ಬಿದ್ದು ಅಪಾಯವಾಗುತ್ತಿದೆ, ಶಾಲೆಗಳ ಶಿಕ್ಷಕರು ಆತಂಕದಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾಗಿದೆ. ಸರ್ಕಾರ ಈ ಕೂಡಲೇ ಶಿಥಿಲಾವಸ್ಥೆಯಲ್ಲಿದ್ದ ಶಾಲೆಗಳ ದುರಸ್ತಿಗೆ ಮುಂದಾಗಬೇಕಿದೆ.