ರಾಯಚೂರು, ಡಿ.೩-ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಿಸಲು ಅನೇಕ ಪ್ರಯತ್ನಗಳು ಸಾಗಿವೆ. ಆದರೆ ಈ ಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಚಟುವಟಿಕೆಯಾಧಾರಿತ ಅಭ್ಯಾಸ ಕೈಗೊಳ್ಳಲು ಪೂರಕವಾಗಿ ಕಲಿಕಾ ಆಸರೆ ಪುಸ್ತಕಗಳು ಶೈಕ್ಷಣಿಕ ಪೂರ್ಣಗೊಂಡರೂ ಈ ವರ್ಷವೂ ಸರಬರಾಜು ಮಾಡುವಲ್ಲಿ ಶಾಲಾ ಶಿಕ್ಷಣ ಇಲಾಖೆ ಮುಂದಾಗಿಲ್ಲ.
ರಾಜ್ಯದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದ್ದು ಮಾರ್ಚ ತಿಂಗಳಲ್ಲಿ ಪರೀಕ್ಷೆ ನಡೆಸಲು ಸಿದ್ದವಾಗಿದೆ. ಆದರೆ ಈ ಭಾಗದ ವಿದ್ಯಾರ್ಥಿಗಳಿಗೆ ಕಲಿಕೆ ಪೂರಕವಾಗಿ ಚಟುವಟಿಕೆ ನಡೆಸುವ ಕಲಿಕಾ ಆಸರೆ ಪುಸ್ತಕ ಇಂದಿಗೂ ವಿದ್ಯಾರ್ಥಿಗಳಿಗೆ ತಲುಪಿಲ್ಲ. ವಾರ್ಷಿಕ ಪರೀಕ್ಷೆಗಳು ಎದುರಿಸಲು ನಾಲ್ಕು ತಿಂಗಳು ಮಾತ್ರ ಬಾಕಿಯಿದ್ದು, ಫಲಿತಾಂಶ ಹೆಚ್ಚಿಸಲು ಬೇಕಾದ ಪ್ರಕ್ರಿಯೆಗೆ ಇಲಾಖೆಯ ನಿರಾಸಕ್ತಿಯೇ ಎದ್ದು ಕಾಣುತ್ತಲಿದೆ.
ವರ್ಷದಿಂದ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಹಾದಿಯಲ್ಲಿ ಮುಂದುವರೆದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆಗ ವಿಷಯಾಧಾರಿತ ಶಿಕ್ಷಕರ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ಅತಿಥಿ ಶಿಕ್ಷಕರಿಂದಲೇ ಅಭ್ಯಾಸಕ್ಕೆ ಒತ್ತು ನೀಡುವದಾಗಿ ಇಲಾಖೆಯೂ ಹೇಳುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯೂ ಹೇಳುತ್ತಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗಿಲ್ಲ. ಆಯಾ ಜಿಲ್ಲಾಡಳಿತಗಳು ಶಿಕ್ಷಕರ ಮೇಲೆ ಒತ್ತಡ ಹಾಕಿ ಫಲಿತಾಂಶ ಹೆಚ್ಚಿಸಲು ಕಾರ್ಯಗಾರ,ಸಭೆಗಳನ್ನು ನಡೆಸಲಾಗುತ್ತಿದೆ ಹೊರತು ಮಕ್ಕಳ ಕಲಿಕೆಗೆ ಇರುವ ಸಮಸ್ಯೆ ಅರಿಯವಲ್ಲಿ ಮಾತ್ರ ಇಲಾಖೆ ನಿಗದಿತ ಮಾರ್ಗದಲ್ಲಿ ಯೋಚಿಸದೇ ಹೋಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುವಂತಾಗಿದೆ. ಗಣಿತ, ವಿಜ್ಞಾನ, ಇಂಗ್ಲೀಷ್ ಭಾಷಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆ ಪುನರ್ ಮನನ ಮಾಡಲು ಚಟುವಟಿಕೆಆಧಾರಿತ ಪುಸ್ತಕಗಳ ಅವಶ್ಯಕತೆಯನ್ನು ಇಲಾಖೆಯೇ ಮನಗಂಡು ಪೂರೈಸುವ ಯೋಜನೆ ರೂಪಿಸಿತ್ತು. ಆದರೆ ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಕಲಿಕಾ ಆಸರೆ ಪುಸ್ತಕ ಪೂರೈಸಲಾಗಿತ್ತು. ಈ ಬಾರಿಯೂ ಸಹ ಡಿಸೆಂಬರ್ ತಿಂಗಳು ಕಳೆದರೂ ಕಲಿಕಾ ಆಸರೆ ಪುಸ್ತಕಗಳು ಶಾಲೆಗೆ ತಲುಪಿಲ್ಲ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಸರಿ ಸುಮಾರು ೨೫,೬೦೦ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ ಕಲಿಕಾ ಆಸರೆ ಪುಸ್ತಕ ಮುದ್ರಣ ಟೆಂಡರ್ ಪ್ರಕ್ರಿಯೆ ವಿಳಂಬದಿAದಾಗಿ ಪುಸ್ತಕ ಪೂರೈಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾದರೂ ಪೂರೈಕೆ ವ್ಯವಸ್ಥೆ ಮಾಡಬೇಕೆನ್ನುವದು ವಿದ್ಯಾರ್ಥಿಗಳ ಒತ್ತಾಯವಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಆಡಳಿತಾತ್ಮಕವಾಗಿಇರುವ ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಮಾಡಬೇಕಿದೆ.