ರಾಯಚೂರು,ಫೆ.೨೩- ನಗರಸಭೆ ವ್ಯಾಪ್ತಿ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸಲು ಮಳಿಗೆ ಖಾಲಿ ಮಾಡಿದಲು ಹೋದ ನಗರಸಭೆ ಸಿಬ್ಬಂದಿ ಮೇಲೆ ಮಚ್ಚು ಹಿಡಿದು ಅವಾಚ್ಯವಾಗಿ ನಿಂದಿಸದ ಘಟನೆ ನಗರದ ಮಹಿಳಾ ಸಮಾಜ ಬಳಿ ಜರುಗಿದೆ.
ಬಾಕಿಯಿರು ಮಳಿಗೆ ಬಾಡಿಗೆ ಪಾವತಿಸಿ ಟೆಂಡರ್ ಪ್ರಕ್ರಿಯೆ ಮೂಲಕ ಪಡೆಯುವಂತೆ ಕಳೆ ಏಪ್ರೀಲ್ ತಿಂಗಳಲ್ಲಿ ಬಾಡಿಗೆದಾರರಿಗೆನೋಟಿಸ್ ನೀಡಲಾಗಿತ್ತು. ವರ್ಷ ಕಳೆದರೂ ಬಾಡಿಗೆಯೂ ಪಾವತಿಸದೇ ಮಳಿಗೆ ಖಾಲಿ ಮಾಡದೇ ಇರುವದರಿಂದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವು ಗೊಳಿಸಲು ಹೊಇದಾಗ ಬಾಡಿಗೆದಾರನೊಬ್ಬ ಮಚ್ಚು ಹಿಡಿದು ಸಿಬ್ಬಂದಿಗಳಿಗೆ ಬೆದರಿಸಿದ್ದಾನೆ ಎಂದು ಹೇಳಲಾಗಿದೆ. ಶಂಸುದ್ದೀನ ಎಂಬ ವ್ಯಾಪಾರಿ ಬೆದರಿದ್ದಾನೆ ಸಿಬ್ಬಂದಿಗಳು ತೆರವುಗೊಳಿಸುವಂತೆ ಸೂಚಿಸಿದ್ದಾರೆ.ಮಹಿಳಾ ಸಮಾಜ ಮತ್ತು ನಗರಸಭೆ ಬಳಿಯ ಮಳಿಗೆಗೂ ಬೀಗ ಹಾಕಲಾಯಿತು. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.