Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಲಿಂಗಸೂಗುರು ತಹಸೀಲ್ ಕಚೇರಿ ಎಫ್ಡಿಎ ಯಲ್ಲಪ್ಪ ಒಂದು ಕೋಟಿ ಹಣ ಪತ್ನಿ,ಮಗನ ಖಾತೆಗೆ ಜಮಾ: ದೂರು ದಾಖಲು

ಲಿಂಗಸೂಗುರು ತಹಸೀಲ್ ಕಚೇರಿ ಎಫ್ಡಿಎ ಯಲ್ಲಪ್ಪ ಒಂದು ಕೋಟಿ ಹಣ ಪತ್ನಿ,ಮಗನ ಖಾತೆಗೆ ಜಮಾ: ದೂರು ದಾಖಲುOplus_131072

ರಾಯಚೂರು.ಫೆ.೨೦- ಲಿಂಗಸೂಗೂರು ತಹಸೀಲ್ ಕಚೇರಿ ಸಿಬ್ಬಂದಿಯೊಬ್ಬರು ಸರ್ಕಾರ ಯೋಜನೆಗಳ ಹಣವನ್ನು ಸ್ವತಃ ಪತ್ನಿ, ಮಗಳ ಖಾತೆಗೆ ಜಮಾಮಾಡಿಕೊಂಡ ಸರ್ಕಾರಕ್ಕೆ ವಂಚಿಸಿರುವ ಘಟನೆ ಬಹಿರಂಗವಾಗಿದೆ. ತಹಸೀಲ್ದಾರ ಸಿಬ್ಬಂದಿ ವಿರುದ್ದ ವಂಚನೆ ದೂರು ದಾಖಲಿಸಿದ್ದಾರೆ.
ಲಿಂಗಸುಗೂರು ತಹಶೀಲ್ದಾರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಎಂಬುವವರು ವಂಚಿಸಿರುವದು ಬಯಲಾಗಿದೆ.
ಮುಜರಾಯಿ ದೇವಸ್ಥಾನದ ಅರ್ಚಕರಿಗೆ ನೀಡುವ ಸ್ವಸ್ಥೀಕ್ ಹಣ ಮತ್ತು ಪ್ರಕೃತಿ ವಿಕೋಪದ ಪರಿಹಾರ ಹಣವನ್ನು ಖೋಟಿ ಸಹಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಹಣ ನುಂಗಿ ಹಾಕಿದ್ದಾರೆ.
ತಹಶೀಲ್ದಾರ ಕಚೇರಿಯ ಎಸ್‌ಡಿಎ ಯಲ್ಲಪ್ಪ ತಂ/ ಹನುಮಂತ (೫೫) ಹಾಗೂ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗಳು ಸೇರಿ ೧,೮೭,೮೬,೫೬೧ ರೂ.ಗಳ ಭಾರಿ ಅವ್ಯವಹಾರ ನಡೆಸಿರುವ ಕುರಿತು ದೂರು ದಾಖಲಾಗಿದೆ. ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಿಬೇಕಾದ ಸ್ವಸ್ಥಿಕ್ ಯೋಜನೆ ಶಿಲ್ಕಿನ ಖಾತೆ ನಂ.೪೨೧೦೧೦೧೦೦೨೭೩೯ ಯಿಂದ ೩೮,೮೬,೩೯೭ ರೂ.ಗಳನ್ನು ಯಲ್ಲಪ್ಪ ತನ್ನ ಮಗನಾದ ವಿಶಾಲ್ ಮಾಲೀಕತ್ವದ ವಿಶಾಲ್ ಡೆಕೋರೇಟರ್ಸ್ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಖಾತೆ ನಂ. ೪೨೧೦೨೦೧೦೦೦೧೧೪ ಜಮಾ ಮಾಡಲಾಗಿದೆ. ೯ ಜನವರಿ ೨೦೨೫ ರಂದು ಇದೇ ಖಾತೆಗೆ ದೇವಸ್ಥಾನಗಳ ಬಾಬತ್ತು ಖಾತೆ ನಂ. ೪೨೧೦೧೦೧೦೦೩೨೮೭ಯಿಂದ ೩೬,೬೨,೫೯೭ ರೂ.ಗಳನ್ನು ಜಮಾ ಮಾಡಲಾಗಿದೆ. ಇನ್ನೊಂದು ದೇವಸ್ಥಾನಗಳ ಬಾಬತ್ತು ಖಾತೆ ನಂ. ೪೨೧೦೧೦೧೦೦೩೨೮೬ ಯಿಂದ ೪೨,೩೦,೨೯೬ ರೂ.ಗಳನ್ನು ಜಮಾ ಮಾಡಲಾಗಿದೆ. ಪ್ರಕೃತಿ ವಿಕೋಪ ಪರಿಹಾದ ಖಾತೆ ನಂ. ೪೨೧೦೧೦೧೦೦೨೯೪೨ ಯಿಂದ ೧೯,೮೧,೫೩೮ ರೂ.ಗಳನ್ನು ತನ್ನ ಮಗ ವಿಶಾಲ್ ಖಾತೆಗೆ ಜಮಾ ಮಾಡಿದ್ದಾನೆ.
ಮಗಳಾದ ದೀಪಾ ಇವರ ಮಾಲೀಕತ್ವದ ದೀಪಾ ಟೆಕ್ಸ್ ಟೈಲ್ಸ್ ಮತ್ತು ಕಿರಾಣಿ ಸ್ಟೊರ‍್ಸ್ ಹೆಸರಿನಲ್ಲಿರುವ ಖಾತೆ ನಂ. ೧೨೦೦೦೧೯೫೫೯೫೬ಗೆ ೨೧,೭೫,೯೯೪ ರೂ.ಗಳನ್ನು ಹಾಗೂ ೭,೧೮,೩೯೭ ರೂ.ಗಳನ್ನು ಜಮಾ ಮಾಡಿಕೊಂಡಿದ್ದಾನೆ..
ಹೆAಡತಿಯಾದ ನಿರ್ಮಲಾ ಇವರ ಮಾಲೀಕತ್ವದ ನಿವiðಲಾ ಡಿಜಿಟಲ್ ಫ್ಲೆಕ್ಸ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ನಂ. ೧೨೦೦೦೧೯೫೬೩೬ಗೆ ೧೧,೧೯,೨೩೮ ರೂ.ಗಳನ್ನು ಹಾಗೂ ಪ್ರಕೃತಿ ವಿಕೋಪದ ಪರಿಹಾರದ ಖಾತೆ ನಂ. ೪೨೧೦೧೦೧೦೦೨೯೪೨ ಜಮಾ ಮಾಡಲಾಗಿದೆ. ಅಲ್ಲದೇ ಮೂಲ ಖಾತೆಗಳಲ್ಲಿ ಬಾಕಿ ಉಳಿದ ಹಣವನ್ನು ತಹಶೀಲ್ ಕಾರ್ಯಾಲಯದಲ್ಲಿರುವ ಸೆನ್ಸಸ್‌ಗೆ ಸಂಬAಧಿಸಿದ ಖಾತೆ ನಂ. ೪೨೧೦೧೦೧೦೦೨೧೩೧ಗೆ ೧೧,೪೫,೩೬೧.೭೨ ರೂ.ಗಳನ್ನು ವರ್ಗಾವಣೆ ಮಾಡಿ ಮೇಲ್ಕಂಡ ತಹಶೀಲ್ ಕಾರ್ಯಾಲಯದ ಖಾತೆಗಳನ್ನು ಮುಕ್ತಾಯಗೊಳಿಸಬೇಕೆಂದು ಬ್ಯಾಂಕಿಗೆ ಮನವಿ ಮಾಡಿದ್ದಾನೆ.
ತಹಶೀಲ್ದಾರ್ ಕಚೇರಿ ಸಿಬ್ಬಂದಿ ಯಲ್ಲಪ್ಪ ತಂ/ ಹನುಮಂತ ೧.೮೭ ಕೋಟಿ ರೂ.ಗಳ ಭಾರಿ ಅವ್ಯವಹಾರ ಮಾಡಿರುವುರಿಂದ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಇಂತಹ ಪ್ರಕರಣ ಈ ಹಿಂದೆ ಎಷ್ಟು ನಡೆದಿರಬಹುದು. ಕೇವಲ ಒಬ್ಬ ಸಿಬ್ಬಂದಿಯಿAದ ಅವ್ಯವಹಾರ ನಡೆದಿಲ್ಲ. ಇದರಲ್ಲಿ ಇತರರು ಶಾಮೀಲಾಗಿರುವ ಅರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಭಾರಿ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ತಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರು ಆಗ್ರಹಿಸಿದ್ದಾರೆ

Megha News