Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಲೋಕಸಭಾ ಚುನಾವಣೆ ನೀತಿ ಸಂಹಿತೆ: ತೆರವಾಗದ ಸರ್ಕಾರದ ಪೋಸ್ಟರ್ ಗಳು

ಲೋಕಸಭಾ ಚುನಾವಣೆ ನೀತಿ ಸಂಹಿತೆ: ತೆರವಾಗದ ಸರ್ಕಾರದ ಪೋಸ್ಟರ್ ಗಳು

ರಾಯಚೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿ ತಿಂಗಳುಗಳೇ ಆಗುತ್ತಿದ್ದು, ಆದರೆ ರಾಜಕೀಯ ವ್ಯಕ್ತಿಗಳಿರುವ ಸರ್ಕಾರದ ಪೋಸ್ಟರ್ ಗಳು ಮಾತ್ರ ಇನ್ನೂ ತೆರವುಗೊ ಳಿಸಲು ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಆಗುತ್ತಿಲ್ಲ.

ಇತ್ತೀಚೆಗೆ ಲಿಂಗಸುಗೂರು ಪಟ್ಟಣ, ರಾಯ ಚೂರು ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಬಸ್ ಗಳ ಮೇಲಿರುವ ಸರ್ಕಾರಿ ಜಾಹಿರಾ ತುಗಳನ್ನು ತೆರವುಗೊಳಿಸಲಾಗಿದ್ದಿಲ್ಲ. ಈ ವಿಚಾರಗಳು ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿತ್ತು. ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಸರ್ಕಾರದ ಯೋಜನೆಗಳ ಪೋಸ್ಟರ್ ಗಳು ಹಾಗೂ ರಾಜಕೀಯ ವ್ಯಕ್ತಿಗಳ ಭಾವಚಿತ್ರವಿರುವ ಜಾಹಿರಾತುಗಳು ತೆರವುಗೊಳ್ಳುತ್ತಿವೆ ಆದರೆ‌ಮುಖ್ಯವಾಗಿ ಸರ್ವಜನಿಕ ಸ್ಥಳಗಳಲ್ಲಿ ಈ ಪೋಸ್ಟರ್ ಗಳು ತೆರವುಗೊಳ್ಳಬೇಕಾಗಿದೆ.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಪ್ರವೇಶ ಭಾಗದ ಬಲಗಡೆ ದ್ವಿಚಕ್ರ ವಾಹನಗಳು ಪಾರ್ಕ್ ಮಾಡುವ ಸ್ಥಳದ ಗೋಡೆಯ ಮೇಲೆ ಸರ್ಕಾರ ಆರೋಗ್ಯ ಇಲಾಖೆಯ ಜಾಹಿರಾತು ಪೋಸ್ಟರ್ ಇದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭಾವಚಿತ್ರ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ಪೋಸ್ಟರ್ ತೆರವಿಗೆ ಕ್ರಮ ಕೈಗೊಳ್ಳಬೇಕಾಗಿದೆ.

Megha News