ರಾಯಚೂರು. ನಿರ್ಮಿತಿ ಕೇಂದ್ರ ,ಕ್ಯಾಷೋಟೆಕ್ ಯೋಜನಾ ನಿರ್ದೇಶಕನ ಮನೆ ಮೇಲೆ ಬೆಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
ನಗರದ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ,ಐಡಿಎಸ್ ಎಂಟಿ ಲೇ ಔಟ್ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆದಿದೆ.
ಕ್ಯಾಪೋಟೆಕ್ ಇಲಾಖೆಯ ಅಧಿಕಾರಿ ಶರಣಪ್ಪ ಪಟ್ಟೇದ್ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದು, ಮನೆಯಲ್ಲಿ ಶೋಧ ನಡೆಸಿ ದ್ದಾರೆ.
ಲೋಕಾಯುಕ್ತ ಎಸ್ಪಿ ಡಾ. ರಾಮ್. ಎಲ್. ಅರಸಿ ದ್ದಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಯಲ್ಲಿ ತೊಡಗಿದ್ದಾರೆ, ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಮನೆ, ಕಚೇರಿ, ಸಂಬಂ ಧಿಕರ ಮನೆ ಮೇಲೆ, ಏಕಕಾಲಕ್ಕೆ ನಾಲ್ಕು ಕಡೆ ದಾಳಿಗೆ ಮಾಡಲಾಗಿದೆ. ಇನ್ನುಲಿಂಗಸುಗೂರಿನಲ್ಲಿನ ಜಮೀನು ಸೇರಿ ಆಸ್ತಿಗಳ ಪರೀಕ್ಷೆಗೆ ನಡೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿ ಸುತ್ತಿರುವ ಶರಣಪ್ಪ ಪಟ್ಟೇದ ವಿರುದ್ದ ಬ್ರಷ್ಟಾ ಚಾರ ಆರೋಪ ಕೇಳಿಬಂದಿತ್ತು. ತಪಾಸಣೆ ಪೂರ್ಣ ಗೊಂಡ ನಂತರ ಪೂರ್ಣಮಾಹಿತಿ ಲಬ್ಯವಾಗಲಿದೆ.