ರಾಯಚೂರು,ಮಾ.೨೩- ಬೆಲೆ ಕುಸಿತದಿಂದ ಕಂಗಾಲಾಗಿರುವ ಮೆಣಸಿನಕಾಯಿ ಬೆಳೆದ ರೈತರು ನೆರೆಯ ತೆಲಂಗಾಣಕ್ಜೆತೆರಳಿದ್ದಾಗ ೧೦ ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಜಿಲ್ಲೆಯ ರೈತರು ತೆಲಂಗಾಣ ಗುಂಟೂರಿಗೆ ಬೆಳೆದ ಮೆಣಸಿನಕಾಯಿ ಮಾರಾಟಕ್ಕೆ ಹೋಗುತ್ಥಿದ್ದಾಗ ನಲ್ಲಗೊಂಡ ಜಿಲ್ಲೆಯಕೊಂಡಮಲ್ಲೆಪಲ್ಲಿಬಳಿ ಪೊಲೀಸರು ಮತ್ತು ಮಾರಾಟ ತೆರಿಗೆ ಅಧಿಕಾರಿಗಳು ಸೆಲ್ಸ್ ಟೆಕ್ಸ್ ಮತ್ತು ಜಿಎಸ್ಟಿ ಕಟ್ಟುವಂತೆ ತಡೆದಿದ್ದಾರೆ. ರೈತರು ಪಹಣಿ,ತಹಸೀಲ್ದಾರರು ನೀಡಿದ ಪತ್ರ ತೋರಿಸಿದರೂ ಪರಿಗಣಿಸದೇ ಲಾರಿಗಳನ್ನು ವಶಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಮದ್ಯಪ್ರವೇಶಿಸಿ ಮಾರಾಟಕ್ಕೆ ಅವಕಾಶ ನೀಡುವಂತೆ ಮನವಿಮಾಡಿದ್ದಾರೆ. ಈ ಕುರಿತು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಪತ್ರಿಕ್ರಿಯಿಸಿ ತೆಲಂಗಾಣದ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಜಿಲ್ಕೆಯ ಜನಪ್ರತಿನಿದಿಗಳು, ಆಧಿಕಾರಿಗಳು ನೆರವಿಗೆ ಧಾವಿಸಬೆಕಿದೆ.