ರಾಯಚೂರು. ದೇಶಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದದಿಂದ ಆಚರಣೆ ಮಾಡುತ್ತಿದ್ದು, ಎಲ್ಲೆಡೆ ಸಂಭ್ರಮವು ಮನೆ ಮಾಡಿದೆ.
ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ಉಪವಾಸ ಮಾಡಿ ದೇಗುಲಗಳಿಗೆ ತೆರಳಿ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ, ಶಿವನಿಗೆ ಆರತಿ ಮಂಗ ಳಾರತಿ ನೇರವೇರಿಸಿ ಉಪವಾಸ ಆರಂಭಿಸು ತ್ತಾರೆ.
ಮಹಾಶಿವರಾತ್ರಿಯನ್ನ ಜನ ಸಡಗರ ಹಾಗೂ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಬೆಳಗಿನ ಜಾವ ದಿಂದಲೇ ಶಿವದರ್ಶನಕ್ಕೆ ಭಕ್ತರು ದೇವಾಲಯ ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀ ಶ್ವರ ದೇವಾಲಯ, ನಗರೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ ಸೇರಿದಂತೆ ನಗರದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.ಮಹಾರುದ್ರಾಭೀಷೆಕ, ಹೋಮ ಹವನಗಳು ನಿರಂತರವಾಗಿ ನಡೆದಿದ್ದು.ರಾತ್ರಿ ಜಾಗರಣೆಗೆ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಸ್ಥಾನಗಳಲ್ಲಿ ದೇವಸ್ಥಾನ ಸಮಿತಿಯಿಂದ ಭಕ್ತಾಧಿಗಳಿಗೆ ಪ್ರಸಾದ ಮತ್ತು ಮಜ್ಜಿಗೆ ಹಾಗೂ ಹಣ್ಣು ಹಂಪಲ ವಿತರಣೆ ಮಾಡಿದರು.
ಬಿಸಿಲು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸಾಲಿನಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು, ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ಮನೆಯಿಂದಲೇ ಪ್ರಸಾದ ತಂದು ಭಕ್ತರಿಗೆ ವಿತರಣೆ ಮಾಡಿದರು.
ಕೆಲ ದೇವಸ್ಥಾನಗಳಲ್ಲಿ ಸ್ವಯಂ ಸೇವಕರು ಭಕ್ತರಿಗೆ ಸರತಿ ಸಾಲಿನಲ್ಲಿ ನಿಂತು ಹೋಗಲು ಅನುಕೂಲ ಮಾಡಿಕೊಟ್ಟರು.