ರಾಯಚೂರು.ದಕ್ಷಿಣ ವಲಯ ಪ್ರಿ ರಿಪಬ್ಲಿಕ್ ಡೇ ಪರೇಡ್ ಕ್ಯಾಂಪ್ಗೆ ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕಿ ಮಮತಾ ಮಲ್ಲೇಶ ನಾಯಕ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜರುಗಲಿರುವ ದಕ್ಷಿಣ ವಲಯ ಪ್ರಿ ರಿಪಬ್ಲಿಕ್ ಡೇ ಪರೇಡ್ ಶಿಬಿರದಲ್ಲಿ ಭಾಗವಹಿಸಲು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿನಿ ಸ್ವಯಂ ಸೇವಕಿ ಕು. ಮಮತಾ ಮಲ್ಲೇಶ ನಾಯಕ ಆಯ್ಕೆಯಾಗಿದ್ದು ಜನವರಿ 26 ರ ಗಣರಾಜ್ಯೋತ್ಸವ ದಿನದಂದು ನವ ದೆಹಲಿಯ ಕರ್ತವ್ಯ ಪಥದ ಮೇಲೆ ನಡೆಯುವ ಗಣರಾ ಜ್ಯೋತ್ಸವ ಪಥಸಂಚಲನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ತಂಡವೂ ಭಾಗವಹಿಸುತ್ತದೆಂದರು.
ಅಂದು ರಾಷ್ಟ್ರೀಯ ಪಥಸಂಚಲನದಲ್ಲಿ ಭಾಗವಹಿಸುವ ಎಲ್ಲ ತಂಡಗಳು ರಕ್ಷಣಾ ಪಡೆಯ ವಿವಿಧ ತಂಡಗಳಾಗಿದ್ದು ಎನ್ ಎಸ್ ಎಸ್ ತಂಡ ಮಾತ್ರ ಏಕೈಕ ನಾಗರಿಕ ಪಥಸಂಚಲನ ತಂಡವಾಗಿದೆ ಎಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಹಾಗೂ ಎನ್ಎಸ್ ಎಸ್ ಪರೇಡ್ ತಂಡದ ತರಬೇತುದಾರ ಪ್ರಾಂಶುಪಾಲರಾದ ಡಾ.ಪುಷ್ಪ, ಡಾ. ಸಂತೋಷಕುಮಾರ ರೇವೂರ ತಿಳಿಸಿದ್ದಾರೆ.