ರಾಯಚೂರು. ಕುಡಿಯುವ ನೀರು ಹಾಗೂ ವಿಮಾನ ನಿಲ್ದಾಣದ ಕುರಿತು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರೊಂದಿಗೆ ಚರ್ಚೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗದಂತೆ ಕ್ರಮ ವಹಿಸಬೇಕು, ಮಾವಿನಕೆರೆ ಅಭಿವೃದ್ಧಿಗೆ ಕೆರೆಯಲ್ಲಿರುವ ಖಾಸಗಿ ಜಮೀನು ಕುರಿತು ಮಾಹಿತಿ ಪಡೆದರು. ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಮಾಹಿತಿ ಪಡೆದು ಹೆಚ್ಚುವರಿ ಭೂಮಿಗಾಗಿ ಸುತ್ತಮುತ್ತಲಿನ ಜಮೀನು ಪಡೆಯಲು ಬೇಕಾದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರ ಕಮಿಷನರ್ ಮಹಮದ್ ಜಿಲಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.