ರಾಯಚೂರು. ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿಗಾಗಿ 5 ಕೋಟಿ ವೆಚ್ಚದ ನಿರ್ಮಿಸುವ ಕಾಮಗಾರಿಗೆ ಸರ್ವಧರ್ಮ ಗುರುಗಳ ಅಮೃತ ಹಸ್ತದೊಂದಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್ ಎಸ್ ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರು ಭೂಮಿ ಪೂಜೆ ಮಾಡಿ ಶಂಕು ಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿ, 115 ಎಕರೆ ಪ್ರದೇಶ ದಲ್ಲಿರುವ ಮಾವಿನ ಕೆರೆ ಅಭಿವೃದ್ಧಿ ಮಾಡುವ ಉದ್ದೇಶವಿದೆ. ನಗರದ ನಾಗರಿಕರಿಗೆ ವಾಯುವಿಹಾರ ಜೊತೆಗೆ ಪ್ರೇಕ್ಷ ಣೀಯ ಸ್ಥಳವನ್ನಾಗಿ ಮಾಡಿ ಉತ್ತಮ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಕೆರೆ ಸುತ್ತಲೂ ವಾಯು ವಿಹಾರ ಫುಟ್-ಪಾತ್, ಕಾರಂಜಿ, ಜಿಮ್, ಮತ್ತು ಮಕ್ಕಳ ಆಟಿಕೆ ಗಾಗಿ ಅಳವಿಡಿಸಲಾಗುವುದು. ಉತ್ತಮ ರೀತಿಯಲ್ಲಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಿಲ್ಲೆಬ್ರಹನ್ ಮಠದ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಹಿರೇಮಠದ ಶ್ರೀ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು, ಓಂ ಶಾಂತಿಯ ಸ್ಮೀತಾ ಅಕ್ಕ, ಮುಸ್ಲೀಂ ಧರ್ಮ ಗುರುಗಳು, ಶಾಸಕರಾದ ಶಿವರಾಜ ಪಾಟೀಲ್, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ್, ಪರಿಷತ್ ಸದಸ್ಯರಾದ ಎ ವಸಂತ ಕುಮಾರ, ಜಿಲ್ಲಾಧಿಕಾರಿ ನಿತೀಶ ಕೆ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್ ಬಸನಗೌಡ ಬಾದರ್ಲಿ, ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಜಯಣ್ಣ ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಶಿವಮೂರ್ತಿ, ದರೂರು ಬಸವರಾಜ, ನಗರಸಭೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಬಿ ರಮೇಶ, ತಿಮ್ಮಾರಡ್ಡಿ, ಶ್ರೀನಿವಾಸ ರಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠ ಧಿಕಾರಿಗಳಾದ ಪುಟ್ಟ ಮಾದಯ್ಯ, ಉಪಾಧ್ಯಕ್ಷರಾದ ಸಾಹಜಿದ್ ಸಮೀರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ಇಟಗಿ, ಶಿವಕುಮಾರ್ ನಾಯಕ್, ನರಸಿಂಹಲು ಮಾಡಿಗಿರಿ, ದರೂರು ಬಸವರಾಜ, ಮೌಲಾನಾ ಫರೀದ್,ಅರುಣ ದೋತರಬಂಡಿ, ಶೈಬಾಜ್, ಆದಿಲ್, ನೀರಾವರಿ ಇಲಾಖೆಯ ಲೋಕೆಶ ಸೇರಿದಂತೆ, ಎಲ್ಲಾ ಸಮಾಜದ ಮುಖಂಡರು ಸೇರಿ ಅನೇಕರು ಇದ್ದರು.